ಸಮಿತಿಗೆ ಸುಬ್ಬಣ್ಣನ ಕೆರೆ ಹಸ್ತಾಂತರ

pond
ಧರ್ಮಸ್ಥಳ ಯೋಜನೆಯಿಂದ ಜೀರ್ಣೋದ್ಧಾರಗೊಂಡ ಸುಬ್ಬಣ್ಣನ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗೀತಾ, ಗಣಪತಿ, ದೂದ್ಯನಾಯ್ಕ, ರಮೇಶ್, ಕಮಲಿಬಾಯಿ ಇತರರಿದ್ದರು.
Published on

ಆಯನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಮೊಗ್ಗ-2 ಯೋಜನಾ ವ್ಯಾಪ್ತಿಯ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಗೆಜ್ಜೇನಹಳ್ಳಿ ಗ್ರಾಮದ ಸುಬ್ಬಣ್ಣನ ಕೆರೆಗೆ ಬಾಗಿನ ಅರ್ಪಿಸಲಾಯಿತು. ಕೆರೆ ನಿರ್ವಹಣೆ ಜವಾಬ್ದಾರಿ ಹಾಗೂ ಕೆರೆ ಸಂರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಚಿತ್ರದುರ್ಗ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕಿ ಗೀತಾ, ಗ್ರಾಪಂ ಅಧ್ಯಕ್ಷ ದೂದ್ಯನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಕಮಲಿಬಾಯಿ, ಶಾಂತಾಬಾಯಿ, ಪಿಡಿಒ ಶಿವಕುಮಾರ್, ಕೆರೆ ಇಂಜಿನಿಯರ್ ಗಣಪತಿ, ಯೋಜನಾಧಿಕಾರಿ ರೂಪಾ ಆದರ್ಶ, ಕೆರೆ ಸಮಿತಿ ಅಧ್ಯಕ್ಷ ಈರ ನಾಯ್ಕ, ಪದಾಧಿಕಾರಿ ನಾಗರಾಜ್ ನಾಯಕ್, ಕೃಷಿ ಮೇಲ್ವಿಚಾರಕ ಪ್ರಕಾಶ್, ವಲಯ ಮೇಲ್ವಿಚಾರಕ ಪ್ರಶಾಂತ್, ಸೇವಾ ಪ್ರತಿನಿಧಿ ಧನುಭಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net