ದುಡಿಮೆಯೊಂದಿಗೆ ಓದು! ವಿದೇಶದಲ್ಲಿ ಡಿಪ್ಲೊಮಾ ಶಿಕ್ಷಣ- ದೇಶದಲ್ಲೇ ಮೊದಲ ಪ್ರಯತ್ನ

diploma
Published on

|ರುದ್ರಣ್ಣ ಹತಿರ್ಕೋಟೆ, ಬೆಂಗಳೂರು

ಡಿಪ್ಲೊಮಾ ಶಿಕ್ಷಣಕ್ಕೆ ಹೊಸ ರೂಪ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಅಮೆರಿಕದ ಕಮ್ಯೂನಿಟಿ ಕಾಲೇಜುಗಳ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಹೆಜ್ಜೆ ಇಟ್ಟಿದೆ. ಡಿಪ್ಲೊಮಾ ವಿದ್ಯಾಥಿರ್ಗಳಿಗೆ ಉದ್ಯೋಗದ ಅವಕಾಶ ತೆರೆಯಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಹೊಸ ಹೊಸ ಕೋರ್ಸ್​ ಆರಂಭಿಸಿದ್ದ ಸರ್ಕಾರ, ಇದೀಗ ವಿದೇಶದಲ್ಲೂ ಡಿಪ್ಲೊಮಾ ವಿದ್ಯಾಥಿರ್ಗಳಿಗೆ ಶಿಕ್ಷಣ ಹಾಗೂ ಪದವಿ ಕೊಡಿಸಲು ಮುಂದಾಗಿದೆ. ದುಡಿಮೆ ಜತೆಗೆ ಓದಿಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ವಿನೂತನ ಪ್ರಯತ್ನಕ್ಕೆ ಸಜ್ಜಾಗಿದೆ.

ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಂತಿರಬೇಕೆಂಬ ಅಂಶ ಇದೆ. ಅದನ್ನು ರಾಜ್ಯ ಸರ್ಕಾರ ಡಿಪ್ಲೊಮಾ ಮೂಲಕ ಜಾರಿಗೆ ತರುತ್ತಿದೆ. ಮೊದಲು ಇಂಜಿನಿಯರಿಂಗ್​ ಮುಗಿದ ನಂತರ ಉನ್ನತ ವ್ಯಾಸಂಗ ಅಥವಾ ದುಡಿಯಲು ವಿದೇಶಕ್ಕೆ ಹೋಗಬೇಕಿತ್ತು. ಈಗ ಡಿಪ್ಲೊಮಾ ಓದುತ್ತಲೇ ಕೆಲಸದ ಅವಕಾಶ ಸಿಗಲಿದೆ.

ಹೇಗಿರಲಿದೆ ಕೋರ್ಸ್​?
ಡಿಪ್ಲೊಮಾದಂತೆ ಇದೂ ಮೂರು ವರ್ಷದ ಕೋರ್ಸ್​ ಆಗಿರುತ್ತದೆ. ಮೊದಲನೇ ವರ್ಷ ವಿದ್ಯಾಥಿರ್ಗಳು ರಾಜ್ಯದಲ್ಲೇ ಕಲಿಯಲಿದ್ದಾರೆ. ಆಗ ಇಲ್ಲಿನ ಶಿಕ್ಷಕರೇ ಬೋಧನೆ ಮಾಡುತ್ತಾರೆ. ವಿಶೇಷವಾಗಿ ಇಂಗ್ಲಿಷ್​ ಕಲಿಸಲಾಗುತ್ತದೆ. 2ನೇ ವರ್ಷ ಅಮೆರಿಕ ಕಾಲೇಜಿನ ಶಿಕ್ಷಕರು ಆನ್​ಲೈನ್​ ಮೂಲಕ ಪಾಠ ಮಾಡಲಿದ್ದಾರೆ. ಮೂರನೇ ವರ್ಷ ವಿದ್ಯಾಥಿರ್ಗಳು ಅಮೆರಿಕಕ್ಕೆ ಹೋಗಿ ಕಲಿಯಬೇಕಾಗುತ್ತದೆ. ರಾಜ್ಯದಿಂದ 3 ವರ್ಷದ ಡಿಪ್ಲೊಮಾ ಪದವಿಯ ಜತೆಗೆ ಅಮೆರಿಕದ ಕಾಲೇಜುಗಳು ಅಸೋಸಿಯೇಟೆಡ್​ ಡಿಗ್ರಿಯನ್ನು ನೀಡಲಿವೆ. ಇನ್ನೂ ಎರಡು ವರ್ಷ ಹೆಚ್ಚಿಗೆ ಓದಿದರೆ ಪದವಿ ಪ್ರಮಾಣಪತ್ರ ಸಹ ಸಿಗುತ್ತದೆ.


3ನೇ ವರ್ಷ ದುಡಿಯಬಹುದು
3ನೇ ವರ್ಷ ಓದುವ ಸಂದರ್ಭದಲ್ಲಿ ದುಡಿಮೆ ಮಾಡಲು ಅವಕಾಶ ಇದೆ. ವರ್ಷಕ್ಕೆ 10 ಲಕ್ಷ ರೂ.ಗಳ ತನಕ ವೇತನ ಗಳಿಸಬಹುದೆಂದು ಅಂದಾಜಿಸಲಾಗಿದೆ. ನಾಲ್ಕನೇ ವರ್ಷ ಆಪ್ಶನಲ್​ ಪ್ರಾಕ್ಟೀಸ್​ ಟ್ರೇನಿಂಗ್​ ಇರುತ್ತದೆ. ಇಲ್ಲಿ ಪೂರ್ಣ ಪ್ರಮಾಣದ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆ ಸಂದರ್ಭದಲ್ಲಿ 25 ರಿಂದ 30 ಲಕ್ಷ ರೂ.ಗಳ ತನಕ ಗಳಿಸುವ ಅವಕಾಶಗಳಿವೆ. ಇದರಲ್ಲಿ ಶೇ.50 ಖರ್ಚು ಕಳೆದರೂ ಉಳಿದಿದ್ದು ಉಳಿತಾಯವಾಗುತ್ತದೆ.


ಇತರ ಕಾಲೇಜುಗಳಿಗೂ ವಿಸ್ತರಣೆ
ಈ ಯೋಜನೆಗಾಗಿ ಪ್ರಾಯೋಗಿಕವಾಗಿ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್​ ಆಯ್ಕೆ ಮಾಡಲಾಗಿದೆ. ಟೂರ್​ ಆ್ಯಂಡ್​ ಟ್ರಾವೆಲ್​ ಮತ್ತು ಸೈಬರ್​ ಸೆಕ್ಯೂರಿಟಿ ಕೋರ್ಸ್​ ಮಾತ್ರ ಆಯ್ಕೆ ಮಾಡಲಾಗಿದೆ. ಸಾಧಕ&ಬಾಧಕ ಗಮನಿಸಿದ ನಂತರ ಉಳಿದ ಪಾಲಿಟೆಕ್ನಿಕ್​ಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಅಮೆರಿಕ ಹಾಗೂ ಬೇರೆ ಬೇರೆ ದೇಶಗಳ ವಿಶ್ವವಿದ್ಯಾಲಯಗಳ ಜತೆ ಮಾತುಕತೆ ನಡೆಯುತ್ತಿದೆ. ವಿಶ್ವವಿದ್ಯಾಲಯಗಳು ಒಪ್ಪಿದ ನಂತರ ಎಐಸಿಟಿಇ ಒಪ್ಪಿಗೆ ಪಡೆದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ.


ಸರ್ಕಾರದಿಂದಲೇ ಶುಲ್ಕ
ಕಮ್ಯೂನಿಟಿ ಕಾಲೇಜಿನ ಶುಲ್ಕ ಪ್ರತಿ ವಿದ್ಯಾಥಿರ್ಗೆ 6 ಲಕ್ಷ ರೂ.ಗಳೆಂದು ನಿಗದಿ ಮಾಡಲಾಗಿದೆ. ಅಮೆರಿಕಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚ, ಅಲ್ಲಿ ತಂಗುವುದು ಸೇರಿ ಒಟ್ಟಾರೆ 20 ಲಕ್ಷ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. ಮೊದಲ 3 ವರ್ಷ ಸರ್ಕಾರದಿಂದಲೇ ಈ ವೆಚ್ಚ ಭರಿಸುವ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ವಿದ್ಯಾರ್ಥಿಗಳ ಆಯ್ಕೆ
ಪ್ರತಿ ಕೋರ್ಸ್​ಗೆ 30 ಜನರಂತೆ ಎರಡು ಕೋರ್ಸ್​ಗಳಿಂದ 60 ಜನರನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರವೇ ರಾಜ್ಯ ಮಟ್ಟದಲ್ಲಿ ಅಜಿರ್ ಕರೆದು ಪರೀೆ ನಡೆಸುವ ಮೂಲಕ ವಿದ್ಯಾಥಿರ್ಗಳನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿದೆ.

ಹೊಸ ಕೋರ್ಸ್​
ಡಿಪ್ಲೊಮಾದಲ್ಲಿಯೂ ಹೊಸ ಕೋರ್ಸ್​ಗಳನ್ನು ಸರ್ಕಾರ ಆರಂಭಿಸಿದೆ. ಆಲ್ಟರ್ನೇಟಿವ್​ ಎನಜಿರ್ ಟೆಕ್ನಾಲಜಿ, ಸೈಬರ್​ ಭದ್ರತೆ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ, ಪ್ರವಾಸೋದ್ಯಮ, ಕ್ಲೌಡ್​ ಕಂಪ್ಯೂಟಿಂಗ್​, ಆಟೋಮೇಷನ್​ ಮತ್ತು ರೋಬೋಡ್ಸ್​, ಟೆಲಿ ಕಾರ್ಯಕ್ರಮಗಳ ನಿರ್ಮಾಣ

ಶೀಘ್ರ ಒಪ್ಪಂದ: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಯೋಜನೆ ರೂಪುಗೊಂಡಿದೆ. ಒಟ್ಟಿಗೆ ಎರಡು ಪದ್ಧತಿಗಳು ವಿದ್ಯಾಥಿರ್ಗಳಿಗೆ ಸಿಗಲಿವೆ. ಈ ಯೋಜನೆಗೆ ಈಗಾಗಲೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್​ನ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಅಮೆರಿಕದ ಪೆನ್ಸಿಲ್ವೇನಿಯಾದ ಕಮ್ಯೂನಿಟಿ ಕಾಲೇಜುಗಳಾದ ಮಾನ್​ಡಿಗೋಮೇರಿ ಮತ್ತು ಹ್ಯಾರಿಸ್​ರ್ಬಗ್​ಗಳ ಜತೆ ಮಾತುಕತೆ ಅಂತಿಮಗೊಂಡಿದೆ. ಒಂದು ವರ್ಷದಿಂದ ನಡೆದ ಮಾತುಕತೆಯ ಲವಾಗಿ ಶುಲ್ಕ ಕಡಿಮೆ ಮಾಡಿಸಲಾಗಿದೆ. ಶೀಘ್ರದಲ್ಲಿಯೇ ಎರಡೂ ಕಾಲೇಜುಗಳ ಜತೆ ಒಪ್ಪಂದ ಆಗಲಿದೆ.

ಎರಡು ಕೋರ್ಸ್​ಗಳ ಆಯ್ಕೆ: ವಿನೂತನ ಶಿಕ್ಷಣಕ್ಕಾಗಿ ಎರಡು ಕೋರ್ಸ್​ಗಳನ್ನು ಆಯ್ಕೆ ಮಾಡಲಾಗಿದೆ. ಮಾನ್​ಡಿಗೋಮೇರಿ ಕಾಲೇಜಿನಲ್ಲಿ ಟ್ರಾವೆಲ್​ ಆ್ಯಂಡ್​ ಟೂರಿಸಂ ಹಾಗೂ ಹ್ಯಾರಿಸ್​ರ್ಬಗ್​ ಕಾಲೇಜಿನಲ್ಲಿ ಸೈಬರ್​ ಸೆಕ್ಯೂರಿಟಿ ಕೋರ್ಸ್​ನಲ್ಲಿ ಶಿಕ್ಷಣ ನೀಡಲಾಗುತ್ತದೆ.

ಡಿಪ್ಲೊಮಾ ಶಿಕ್ಷಣದಲ್ಲಿ ಹೊಸ ಆವಿಷ್ಕಾರ ಮಾಡುತ್ತಿದ್ದೇವೆ. ಉದ್ಯೋಗದ ಅವಕಾಶ ಹೆಚ್ಚಿಸಲು ವಿದೇಶದಲ್ಲಿಯೂ ಶಿಕ್ಷಣ ಕೊಡಿಸಲಾಗುತ್ತದೆ. ಇಡೀ ದೇಶದಲ್ಲಿ ಇದೊಂದು ವಿನೂತನ ಹಾಗೂ ಮೊದಲನೇ ಪ್ರಯೋಗವಾಗಿದೆ. ಸಾಧಕಬಾಧಕ ಗಮನಿಸಿ ವಿಸ್ತರಣೆ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ . ಸಿ.ಎನ್​. ಅಶ್ವತ್ಥನಾರಾಯಣ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಡಿಪ್ಲೊಮಾ ವಿದ್ಯಾಥಿರ್ಗಳಿಗೆ ಸಿಗುವಂತಾಗುತ್ತದೆ. ಸೂಪರ್​ 30 ರೀತಿಯಲ್ಲಿ ವಿದ್ಯಾಥಿರ್ಗಳ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್​ ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net