

ಕುಶಾಲನಗರ: ವಿದ್ಯಾರ್ಥಿಗಳಲ್ಲಿ ಒತ್ತಡ ಹಾಗೂ ಅಹಂ ಇರಬಾರದು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಬಿ.ಡಿ.ಹರ್ಷ ಸಲಹೆ ನೀಡಿದರು.
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಎರಡು ದಿನಗಳ ‘ಜೀವನ ಕೌಶಲಗಳ’ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಅಹಂ ಇದ್ದಲ್ಲಿ ಭಾವನೆಗೆ ಧಕ್ಕೆ ಬರಲಿದೆ ಎಂದು ತಿಳಿಸಿದರು.
ಅಲ್ಲದೆ ಶಿಸ್ತು, ಸಮಯಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಜೀವನಶೈಲಿ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರಬೇಕು. ಬಾಂಧವ್ಯ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಎಸ್.ಸುನೀಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ನಿಮ್ಹಾನ್ಸ್ ಜೀವನ ಕೌಶಲ ತಂಡದ ಸಂಚಾಲಕಿ ಜೆ.ಎಸ್.ಮಹಾಲಕ್ಷ್ಮೀ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಟಿ.ಎಂ.ಸುಧಾಕರ್, ಕ್ರೀಡಾ ಸಂಚಾಲಕಿ ಪಿ.ಜಯಂತಿ, ಆಂತರಿಕ ಭರವಸೆ ಕೋಶದ ಸಂಚಾಲಕಿ ಎಂ.ಡಾ.ರಶ್ಮಿ, ಡಾ.ಎಸ್. ಸುನೀಲ್ ಕುಮಾರ್, ರೇಂಜರ್ ಘಟಕದ ಸಂಚಾಲಕಿ ಕೆ.ಪಿ.ಕುಸುಮಾ ಇತರರು ಇದ್ದರು.