

ಬೆಂಗಳೂರು: ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ನಗರದ ಫುಲ್ಇನ್ಫ ಕಾಲೇಜಿನ ವಿದ್ಯಾರ್ಥಿಗಳು ಯೋಜನೆಯ ಪ್ರತಿಕೃತಿ ರೂಪಿಸಿ ವಿಶಿಷ್ಟ ರೀತಿಯಲ್ಲಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬೇಗೂರಿನ ಅಕ್ಷಯನಗರದಲ್ಲಿರುವ ಫುಲ್ಇನ್ಪ ಕಾಲೇಜಿನ ವಿದ್ಯಾರ್ಥಿ ವೃಂದವು ಚಂದ್ರಯಾನಕ್ಕೆ ಬಳಸಿದ ರಾಕೆಟ್ 18 ಅಡಿ ಎತ್ತರದ ಪ್ರತಿಕೃತಿ ಹಾಗೂ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ದೃಶ್ಯವನ್ನು ಕೃತಕವಾಗಿ ರೂಪಿಸಿದ್ದಾರೆ. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿದ ಕ್ಷಣವನ್ನು ಪ್ರತಿಬಿಂಬಿಸುವ ಪ್ರತಿಕೃತಿಯನ್ನೂ ರಚಿಸಿ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಮರ್ಪಿಸಲಾಗಿದೆ. ಕಾಲೇಜಿನ ಡೀನ್ ಶ್ರೀಪ್ರಿಯ ರಾವ್ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಂದ್ರಯಾನದ ಪ್ರತಿಕೃತಿ ವಿದ್ಯಾರ್ಥಿಗಳ ಬೋಧನೆಗೂ ಪ್ರಮುಖ ಆಕರವಾಗಿ ಬಳಸಿಕೊಳ್ಳಲಾಯಿತು.
ಹೊಸ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳು ರೂಪಿಸಿದ ಚಂದ್ರಯಾನದ ಪ್ರತಿಕೃತಿಯನ್ನು ಕಾಲೇಜಿನ ಚೇರ್ಮನ್ ಪ್ರೊ. ಡೆಸ್ಮಂಡ್ ಟಿ.ಎಸ್. ಫುಲ್ಇನ್ಫ ಅವರು ಮೆಚ್ಚಿಕೊಂಡು ವಿದ್ಯಾರ್ಥಿ ವೃಂದವನ್ನು ಅಭಿನಂದಿಸಿದರು.
ಪ್ರಾಂಶುಪಾಲ ನವನೀತ್ ಜಿ. ಫುಲ್ಇನ್ಫ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಕಲಾ ಭಟ್ ಹಾಗೂ ಇತರರು ಪಾಲ್ಗೊಂದಿದ್ದರು.