

ರಾಮನಗರ: ಚನ್ನಪಟ್ಟಣ ತಾಲೂಕಿನ ಅಬ್ಬೂರು ದೊಡ್ಡಿ ಗ್ರಾಮದಲ್ಲಿರುವ ಬೀರೇಶ್ವರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯದ ಮೂಲಕ ಗ್ರಾಮೀಣ ಶೈಲಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದರು.
ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ನಿಧಿ ಪ್ರಮುಖ್ ಸಾ. ನಾಗರಾಜ್ ಗೋ ಪೂಜೆ ನೆರವೇರಿಸಿ ಗೋ ಗ್ರಾಸ ನೀಡಿ ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಗೋವಿನ ಮಹತ್ವ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಸಾ. ನಾಗರಾಜ್ ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ವನವಾಸಿ ಕಲ್ಯಾಣ ಆಶ್ರಮದ ರಾಮನಗರ ಸತೀಶ್, ಚನ್ನಪಟ್ಟಣ ತಾಲೂಕಿನ ಆರ್ಎಸ್ಎಸ್ ಕಾರ್ಯಕರ್ತಾರದ ಸುದರ್ಶನ್, ಧನಂಜಯ, ರಾಮಣ್ಣ, ಹಾರೋಕೊಪ್ಪ ಯೋಗೀಶ್, ದೇವರ ಹೊಸಳ್ಳಿ ಪವನ್, ಕನಕಪುರ ಪುಟ್ಟಣ್ಣನವರ ಭಾಗವಹಿಸಿದರು.