ವಿದ್ಯಾರ್ಥಿಗಳಿಗೆ ಅಗತ್ಯ ಸಂವಹನ ಕೌಶಲ ಬೇಕು

sahaydri
ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಕಮ್ಯುನಿಕೇಟಿವ್ ಇಂಗ್ಲಿಷ್ ಕಾರ್ಯಾಗಾರವನ್ನು ಪ್ರೊ. ಟಿ.ಅವಿನಾಶ್ ಉದ್ಘಾಟಿಸಿದರು. ಪ್ರೊ. ಕೆ.ಎಸ್.ಸರಳಾ, ಫ್ರಾನ್ಸಿಸ್ ಡಿಸೋಜ ಇತರರಿದ್ದರು.
Published on

ಶಿವಮೊಗ್ಗ: ಪ್ರಸ್ತುತ ಸಂದರ್ಭದಲ್ಲಿ ಬದುಕು ಕಟ್ಟಿಕೊಳ್ಳಲು ಭಾಷೆಗಳ ಕಲಿಕೆ ಅನಿವಾರ್ಯ. ನಮ್ಮ ಬದುಕು ಹಾಗೂ ಆಲೋಚನಾ ಕ್ರಮ ಭಾಷೆ ಮೇಲೆಯೇ ಅವಲಂಬಿತ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಪ್ರೊ. ಟಿ.ಅವಿನಾಶ್ ಅಭಿಪ್ರಾಯಪಟ್ಟರು.

ವಾಣಿಜ್ಯ ಕಾಲೇಜಿನಲ್ಲಿ ಕಮ್ಯುನಿಕೇಟಿವ್ ಇಂಗ್ಲಿಷ್ ವಿಷಯ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐದನೇ ತರಗತಿಯಿಂದ ಇಂಗ್ಲಿಷ್ ಕಲಿಯುತ್ತಿದ್ದರು. ಈಗ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತರೂ ಗ್ರಾಮೀಣ ಭಾಗದ ಮಕ್ಕಳಲ್ಲಿ ಸಂವಹನದ ಕೊರತೆ ಕಾಣುತ್ತಿದೆ ಎಂದು ತಿಳಿಸಿದರು.

ಭಾಷೆ ಕಲಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಮುಖ್ಯವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಭಾಷೆ ಸಂವಹನ ಮಾಧ್ಯಮ ಎನ್ನುವ ಹೊರತಾಗಿ ಅನೇಕ ಆಯಾಮಗಳನ್ನು ಒಳಗೊಂಡಿದೆ. ಭಾಷೆ ಇಲ್ಲದೆ ಮನುಷ್ಯನ ಅಸ್ತಿತ್ವವಿಲ್ಲ. ಭಾಷೆಯ ರಚನೆ ಹೇಗಿದೆ ಎನ್ನುವುದನ್ನು ಕಲಿಸಿದರೆ ಸಾಕು. ಉಳಿದದ್ದನ್ನು ವಿದ್ಯಾರ್ಥಿಗಳೇ ಕಲಿತುಕೊಳ್ಳುತ್ತಾರೆ. ಹೊರ ಜಗತ್ತಿನಲ್ಲಿ ನಡೆಯುವ ಸಂಗತಿಗಳನ್ನು ಭಾಷೆಯ ಪಠ್ಯಗಳಲ್ಲಿ ಕಥೆ, ಕವನ, ಕಾದಂಬರಿ ಮೂಲಕ ಅನುಭವ ಪಡೆದುಕೊಳ್ಳುತ್ತಾರೆ ಎಂದರು.

ಉಪನ್ಯಾಸಕಿ ಕೆ.ಎಸ್.ಸರಳಾ, ಸಂಪನ್ಮೂಲ ವ್ಯಕ್ತಿ ಫ್ರಾನ್ಸಿಸ್ ಡಿಸೋಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net