VIDEO| ಫೀಸ್​ ಕಟ್ಟುವಂತೆ ಹೇಳಿದ ಶಿಕ್ಷಕನ ಮೇಲೆ ವಿದ್ಯಾರ್ಥಿಗಳಿಂದ ಗುಂಡಿನ ದಾಳಿ

Shootout
Published on

ಭೋಪಾಲ್​: ಮೂರು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ ಫೀಸ್​ಅನ್ನು ಕಟ್ಟುವಂತೆ ಹೇಳಿದ್ದಕ್ಕೆ ವಿದ್ಯಾರ್ಥಿಗಳೇ ಶಿಕ್ಷಕನನ್ನು ಗುಂಡಿಕ್ಕಿ ಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಯೂ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜೌರಾ ರಸ್ತೆಯಲ್ಲಿ ಘಟನೆ ನಡೆದಿದೆ. ಗಾಯಾಳುವನ್ನು ಗಿರ್ವಾರ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪ್ರಕರಣದ ಹಿನ್ನಲೆ?

ಗಿರ್ವಾರ್​ ಸಿಂಗ್​ ಮೊರೆನಾ ಜಿಲ್ಲೆಯ ಜೌರಾ ರಸ್ತೆಯಲ್ಲಿ ಕುಲೇಂದ್ರ ಕೋಚಿಂಗ್​ ಸೆಂಟರ್​ಅನ್ನು ನಡೆಸುತ್ತಿದ್ದಾರೆ. ಆರೋಪಿಗಳಿಬ್ಬರು ಮೂರು ವರ್ಷಗಳ ಹಿಂದೆ ಅವರ ಟುಟೋರಿಯಲ್ಸ್​ನಲ್ಲಿ 12ನೇ ತರಗತಿ ಪರೀಕ್ಷೆಗಾಗಿ ತರಭೇತಿ ಪಡೆಯುತ್ತಿದ್ದರು. ಆರೋಪಿಗಳಿಬ್ಬರು ಟ್ಯೂಷನ್​ ತೊರೆದು ಮೂರು ವರ್ಷಗಳಾದರು ಫೀಸ್​ ಬಾಲಿ ಉಳಿಸಿಕೊಂಡಿದ್ದರು.

ಈ ಬಗ್ಗೆ ಗಿರ್ವಾರ್​ ಸಿಂಗ್​ ಹಲವಾರು ಬಾರಿ ವಿದ್ಯಾರ್ಥಿಗಳಿಬ್ಬರಿಗೆ ಬಾಕಿ ಮೊತ್ತವನ್ನು ಕಟ್ಟುವಂತೆ ಹೇಳಿದ್ದರು. ಇದರಿಂದ ತೀವ್ರ ಸಿಟ್ಟಿಗೆದ್ದ ಆರೋಪಿಗಳಿಬ್ಬರು ಹೊಂಚು ಹಾಕಿ ಶಿಕ್ಷಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ, ಜೂನ್​ 21ರಂದು ಅವರ ಕೋಚಿಂಗ್​ ಸೆಂಟರ್​ ಬಳಿ ಬಂದ ಆರೋಪಿಗಳು ಶಿಕ್ಷಕನ ಜೊತೆ ಮಾತನಾಡಲು ಆರಂಭಿಸಿದ್ಧಾರೆ.

ಪ್ರಾಣಾಪಾಯದಿಂದ ಪಾರು

ಮಾತನಾಡುವ ವೇಳೆ ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ನೋಡ ನೋಡುತ್ತಿದ್ದಂತೆ ತನ್ನ ಬಳಿ ಇದ್ದ ಪಿಸ್ತೂಲ್​ನಿಂದ ಶಿಕ್ಷಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ಧಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕನನ್ನು ಗಮನಿಸಿದ ದಾರಿಹೋಕರೊಬ್ಬರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ಧಾರೆ.

ಗಾಯಾಳು ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಗಾಯಾಳು ಶಿಕ್ಷಕ
ಗಾಯಾಳು ಶಿಕ್ಷಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net