ಆಟವಾಡುತ್ತಿದ್ದ ವೇಳೆ ಬಾಯಲ್ಲಿ ಬ್ಯಾಟರಿ ಸ್ಫೋಟ; ಬಾಲಕನ ಸ್ಥಿತಿ ಚಿಂತಾಜನಕ

Battery Blast
Published on

ಮುಂಬೈ: ಆಟವಾಡುತ್ತಿದ್ದ ವೇಳೆ ಮೇಡ್​ ಇನ್​ ಚೈನಾ ಬ್ಯಾಟರಿಯೊಂದು ಬಾಲಕನ ಬಾಯಲ್ಲಿ ಸ್ಪೋಟಗೊಂಡು ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 9ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ಧಾರೆ.

ಈತನ ಪೋಷಕರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಪೇಪರ್​ ಫ್ಯಾನ್​ ಆಟದಲ್ಲಿ ಬಾಲಕ ಮಗ್ನನಾಗಿದ್ದ. ಆಟಿಕೆಗೆ ಸಣ್ಣ ಮೋಟಾರ್​ ಒಂದನ್ನು ಅಳವಡಿಸಲಾಗಿತ್ತು. ಈ ಮೋಟಾರ್​ ತಿರುಗಲು ಬ್ಯಾಟರಿ ಒಂದನ್ನು ಕನೆಕ್ಟ್​ ಮಾಡಲಾಗಿದೆ. ಬಾಲಕ ಆಟವಾಡುವ ವೇಳೆ ಕೆಲಕಾಲ ಪೇಪರ್​ ಫ್ಯಾನ್​ ತಿರುಗದ ಕಾರಣ ಬ್ಯಾಟರಿ ಬಿಸಿಯಾಗಿದೆ.

ದವಡೆ ಛಿದ್ರ

ಇದನ್ನು ಗಮನಿಸಿದ ಬಾಲಕ ಕೆಲ ಹೊತ್ತಿನ ಬಳಿಕ ಫ್ಯಾನ್​ ವೇಗ ಕಡಿಮೆಯಾಗಿದ್ದನ್ನು ಗಮನಿಸಿ ಮೋಟಾರ್​ ಹಾಗೂ ಬ್ಯಾಟರಿ ನಡುವಿನ ವೈರ್​ ಒಂದನ್ನು ಬಾಯಿಂದ ಕಚ್ಚಿ ಸರಿಪಡಿಸಲು ಮುಂದಾಗಿದ್ದಾನೆ. ಈ ವೇಳೆ ಬ್ಯಾಟರಿ ಸ್ಪೋಟಗೊಂಡಿದ್ದು, ಬಾಲಕನ ದವಡೆ ಛಿದ್ರವಾಗಿದ್ದು ಆತ ಸ್ಥಳದಲ್ಲೇ ಎಚ್ಚರ ತಪ್ಪಿದ್ದಾನೆ.

Battery Blast

ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ತೀವ್ರ ನಿಗಾ ಘಟಕದಲ್ಲಿ ಇರಿಸಿ ಬಾಲಕನಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ಧಾರೆ.

ಇದೇ ಮೊದಲಲ್ಲ

ಮೇಡ್​ ಇನ್​ ಚೈನಾದ ಅನೇಕ ವಸ್ತುಗಳು ಸ್ಪೋಟಗೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಸ್ಮಾರ್ಟ್​ ಪೋನ್​ಗಳು ಹಾಗೂ ಆಟಿಕೆಗಳು ಸ್ಪೋಟಗೊಂಡಿದ್ದು, ಇದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿರುವುದು ದುರಂತ.

ಮೇಡ್ ಇನ್ ಚೀನಾ ವಸ್ತುಗಳಿಗೆ ಗ್ಯಾರೆಂಟಿ ಕಡಿಮೆ. ಆಯಸ್ಸು ಕಡಿಮೆ. ಇತ್ತೀಚೆಗೆ ಭಾರತದಲ್ಲಿ ಚೀನಾ ಬ್ಯಾಟರಿಗಳ ಸಮಸ್ಯೆಯಿಂದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆಗಳು ನಡೆದಿದೆ. ಕೆಲೆವೆಡೆ ಎಲೆಕ್ಟ್ರಿಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಹೊತ್ತಿ ಉರಿದ ಘಟನೆಗಳು ನಡೆದಿದೆ. ಚಾರ್ಚಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಹಲವು ಜೀವಗಳು ಬಲಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net