ಸ್ನೇಹಿತೆ ಜತೆ ವಾಟ್ಸಾಪ್​​​ ಚಾಟ್​ ಮಾಡುತ್ತಿದ್ದ ಸ್ಟೂಡೆಂಟ್ ದಿಢೀರ್​ ಆತ್ಮಹತ್ಯೆ!; ಆಗಿದ್ದಾದರೂ ಏನು? | WhatsApp

dk - 2025-02-18T191020.902
Published on

WhatsApp:ತನ್ನ ಸ್ನೇಹಿತೆ ಜತೆ ವಾಟ್ಸಾಪ್​​​ ಚಾಟ್​ ಮಾಡುತ್ತಿದ್ದ ಶಾಲಾ ವಿದ್ಯಾರ್ಥಿಗೆ ಆಕೆಯ(ಸ್ನೇಹಿತೆ) ಪಾಲಕರು ಬೆದರಿಕೆ ಹಾಕಿದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ತೆಲಂಗಾಣದಲ್ಲಿ ನಡೆದಿದೆ.

ಸ್ಥಳೀಯ ಚುಂಚನಪಲ್ಲಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಮನೋಜ್​(15) ಮೃತ. ಮನೋಜ್​ ಅದೇ ಶಾಲೆಯ ತನ್ನ ಸ್ನೇಹಿತೆ ಜತೆ ವಾಟ್ಸಾಪ್​​ನಲ್ಲಿ ಚಾಟ್​ ಮಾಡುತ್ತಿದ್ದ. ಇದನ್ನು ಗಮನಿಸಿದ ಆಕೆಯ ಕುಟುಂಬಸ್ಥರು ಹುಡುಗನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣದ ಹಿನ್ನೆಲೆ..

ಚುಂಚನಪಲ್ಲಿ ತಾಂಡದ ನಿವಾಸಿ, ರೈತ ರಮೇಶ್​ ಎಂಬುವವರ ಪುತ್ರ 9ನೇ ತರಗತಿಯಲ್ಲಿ ಓದುತ್ತಿರುವ ಮನೋಜ್​. ಅದೇ ಶಾಲೆಯ ಅಪ್ರಾಪ್ತೆ ಬಾಲಕಿಯೊಂದಿಗೆ ಸ್ನೇಹ ಮಾಡಿದ್ದನು. ನಿಧಾನವಾಗಿ ಸ್ನೇಹ ಆಪ್ತವಾಗಿತ್ತು. ಬಳಿಕ ಫೋನ್​ನಲ್ಲಿ ಕಾಲ್​ ಮಾತನಾಡುತ್ತಿದ್ದರು. ಹೀಗೆ ಮುಂದುವರೆದಿದೆ. ಶನಿವಾರ(ಫೆ.15) ರಂದು ಎಂದಿನಂತೆ ಆಕೆಯ ಜತೆ ವಾಟ್ಸಾಪ್​​​ ಚಾಟ್​ ಮಾಡುತ್ತಿದ್ದಾನೆ. ಇನ್ನು ಬಾಲಕಿ ಕೂಡ ಚಾಟ್​ ಮಾಡುತ್ತಿದ್ದು, ಆಕೆ ಕುಟುಂಬ ಸದಸ್ಯರು ನೋಡಿದ್ದಾರೆ. ಹುಡುಗನಿಗೆ ಫೋನ್​ ಮಾಡಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಬಾಲಕ ಮನೆಯಲ್ಲಿದ್ದ ಕಳೆನಾಶಕ(ವಿಷ) ಸೇವಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇನ್ನು ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net