ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು

Karthik
ಕಾರ್ತಿಕ್
Published on

ರಿಪ್ಪನ್‌ಪೇಟೆ: ಸಮೀಪದ ಗವಟೂರು ಗ್ರಾಮದ ಮಜರೆ ಹಳಿಯೂರಿನಲ್ಲಿ ಶುಕ್ರವಾರ ವಿದ್ಯಾರ್ಥಿ ಕಾರ್ತಿಕ್ (20) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ.

ಬೆಳಗಿನ ಜಾವ 5.45ಕ್ಕೆ ಮೂತ್ರ ವಿಸರ್ಜನೆಗೆ ಹೊರ ಹೋಗಿದ್ದಾನೆ. ಮನೆ ಎದುರು ಹಾದುಹೋಗಿರುವ ವಿದ್ಯುತ್ ಮಾರ್ಗದ ತಂತಿ ತುಂಡಾಗಿ ಮನೆಯ ಬೇಲಿ ಮೇಲೆ ಬಿದ್ದಿದ್ದು, ಅದರಿಂದ ವಿದ್ಯುತ್ ಪ್ರವಹಿಸಿದೆ. ಇದನ್ನು ಗಮನಿಸಿದ ಸಂಬಂಧಿಕರು ವಿದ್ಯುತ್ ಕಡಿತಗೊಳಿಸಿ ಪಟ್ಟಣದ ಆಸ್ಪತ್ರೆಗೆ ಕಾರ್ತಿಕನನ್ನು ಕರೆತಂದಿದ್ದಾರೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾರ್ತಿಕ್ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿ ನಿಧನ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಕಾಲೇಜಿಗೆ ರಜೆ ಘೋಷಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net