ಶಾಲೆಯ ಆವರಣದಲ್ಲಿ ಆಡುತ್ತಿದ್ದ ಈ ಪುಟ್ಟ ಬಾಲಕನ ಸಾವು ಅಲ್ಲೇ ಇತ್ತು..

28 svr 04
Published on

ಸವಣೂರ: ಶಾಲೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಾಂಪೌಂಡ್​ ಗೇಟ್ ಬಿದ್ದು ಮೃತಪಟ್ಟ ಘಟನೆ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇರ್ಷಾದ ಜಿಲಾನಿ ಹಂಟೆಗಾಲರ (10) ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಇದೇ ವೇಳೆ ಆತನ ಮೈಮೇಲೆ ಗೇಟ್​ ಮುರಿದುಬಿದ್ದಿದೆ. ತಲೆಗೆ ತೀವ್ರ ಏಟಾಗಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಡಿಡಿಪಿಐ ಅಂದಾನಪ್ಪ ವಡಗೇರಿ, ಬಿಇಒ ಐ.ಬಿ.ಬೆನಕೊಪ್ಪ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net