ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..

Student
Published on

ಬೆಂಗಳೂರು: ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಉಪನ್ಯಾಸಕರೊಬ್ಬರು ಟೆರರಿಸ್ಟ್​ ಎಂದು ಕರೆದಿದ್ದಕ್ಕೆ, ಆ ವಿದ್ಯಾರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಅವರನ್ನು ಅಮಾನತು ಕೂಡ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಈ ಘಟನೆ ನಡೆದಿದೆ. ಮಣಿಪಾಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿ ಮಾತಾಡಿದ್ದಕ್ಕೆ ಪ್ರೊಫೆಸರ್​ರನ್ನು ತರಗತಿಯಿಂದ ಹೊರ ಹಾಕಿ ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಯನ್ನು ಟೆರರಿಸ್ಟ್​ಗೆ ಹೋಲಿಸಿ ಮಾತನಾಡಿದ್ದಕ್ಕೆ ಆತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಘಟನೆ ಕಳೆದ ವಾರ ನಡೆದಿದ್ದು, ಆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರೊಫೆಸರ್ ವಿರುದ್ಧ ಕ್ರಮ ಜರುಗಿದೆ. ಶಿಕ್ಷೆಗೊಳಗಾಗಿದ್ದ ಅಜ್ಮಲ್ ಕಸಬ್​ಗೆ ತನ್ನ ಹೆಸರನ್ನು ಹೋಲಿಸಿ ಮಾತನಾಡಿದ್ದಕ್ಕೆ ಆತ ತರಗತಿಯಲ್ಲೇ ಪ್ರೊಫೆಸರ್​​ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ. ಆಗ ಪ್ರೊಫೆಸರ್ 'ಸಾರಿ' ಎಂದಿರುವುದೂ ವಿಡಿಯೋದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net