

ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರಬಲ ಭೂಕಂಪನ ಅನುಭವಕ್ಕೆ ಬಂದಿದೆ. ಆದರೆ, ಇದುವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಭೂಕಂಪದ ಮೂಲ ನೇಪಾಳದಲ್ಲಿ ಕಂಡು ಬಂದಿರೋದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ವರ್ಷದ ಆರಂಭದಲ್ಲಿ ಟರ್ಕಿ ಮತ್ತು ಸಿರಿಯಾ ದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಬಗ್ಗೆ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ಬೀಟ್ಸ್, ಪಾಕಿಸ್ತಾನದಲ್ಲೂ ಭೂಕಂಪವಾಗ ಬಹುದೆಂದು ಸೋಮವಾರ ಟ್ವೀಟ್ ಮಾಡಿದ್ದರು.
ಪೋಸ್ಟ್ನಲ್ಲಿ ತಿಳಿಸಿದಂತೆಯೇ ಸೆಪ್ಟೆಂಬರ್ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಭೂಕಂಪನ ಅನುಭವಕ್ಕೆ ಬಂದಿತ್ತು. ಮೊರಾಕೊದಂತೆಯೇ ಇಲ್ಲಿಯೂ ಭೂಕಂಪನ ಸಂಬವಿಸಬಹುದು ಎಂದು ವಿಜ್ಞಾನಿ ಬರೆದಿದ್ದಾರೆ.
ಬೆಳಗ್ಗೆ ಭೂಕಂಪನದ ಅನುಭವ
ಮಾಹಿತಿಯ ಪ್ರಕಾರ, ಇಂದು (ಮಂಗಳವಾರ) ಬೆಳಗ್ಗೆ ದೆಹಲಿಯಲ್ಲಿ ಭೂಕಂಪನದ ಅನುಭವವಾಯಿತು. ಭೂಕಂಪದಿಂದ ಜಿಲ್ಲೆಯಲ್ಲಿ ಯಾವುದೇ ಹಾನಿಯಾಗಿರುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯಿಂದ ಪಡೆದ ಮಾಹಿತಿಯ ಪ್ರಕಾರ, ಬೆಳಗ್ಗೆ ಸಂಭವಿಸಿದ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.2 ಎಂದು ಅಳೆಯಲಾಗಿದೆ.