ದಳಪತಿ ವಿಜಯ್​ ನಟನೆಯ 'ಲಿಯೋ' ಆಡಿಯೋ ಲಾಂಚ್​ಗೆ ಬರಲಿದ್ದಾರೆ ಈ ಸ್ಟಾರ್​ ನಟರು?

Untitled design (91) (1)
Published on

ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ನಟ, ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷ್​ನಲ್ಲಿ ಮೂಡಿಬರಲು ಸಜ್ಜಾಗಿರುವ ಬಹುನಿರೀಕ್ಷಿತ 'ಲಿಯೋ' ಚಿತ್ರ ಅಕ್ಟೋಬರ್ 19, 2023 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಆಡಿಯೋ ಲಾಂಚ್​ಗೆ ಖ್ಯಾತ ನಟರು ಹಾಜರಾಗಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿವೆ.

ಈ ವರ್ಷದ ಭಾರೀ ನಿರೀಕ್ಷಿತ ಚಲನಚಿತ್ರಗಳಲ್ಲಿ ದಳಪತಿ ವಿಜಯ್​ ಅವರ 'ಲಿಯೋ' ಸಿನಿಮಾ ಕೂಡ ಒಂದಾಗಿದೆ. ಒಂದೆಡೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮಲೇಷ್ಯಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಆಡಿಯೋ ಲಾಂಚ್​ ಚೆನ್ನೈನಲ್ಲಿ ನಡೆಯುತ್ತದೆ ಎಂದು ಬಲವಾಗಿ ನಂಬಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಘೋಷಿಸುವ ಮುಖೇನ ಊಹಾಪೋಹಗಳಿಗೆ ತೆರೆ ಎಳೆಯಬೇಕಿದೆ.

ಸದ್ಯ ವದಂತಿಗಳು ಅಧಿಕೃತವಾದರೆ, ಚಿತ್ರ ತಯಾರಕರು ಅದ್ಧೂರಿ ಆಡಿಯೋ ಲಾಂಚ್​ ಕಾರ್ಯಕ್ರಮಕ್ಕೆ ಕಮಲ್ ಹಾಸನ್, ವಿಕ್ರಮ್, ಧನುಷ್ ಸೇರಿದಂತೆ ಹಲವು ಸ್ಟಾರ್​ ನಟರಿಗೆ ವಿಶೇಷ ಆಹ್ವಾನವನ್ನು ನೀಡಲಿದ್ದಾರೆ. ಚಿತ್ರದಲ್ಲಿ ವಿಜಯ್​ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಸಂತಿ ಮಾಯಾದೇವಿ, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net