ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಫೇಸ್​ಬುಕ್​-ಟ್ವಿಟರ್​ಗಳೇ ಹೊಣೆ, ರಾಜಕೀಯ ಪಕ್ಷಗಳಿಗೂ ಎಚ್ಚರಿಕೆ..

Social Media
Social Media
Published on

ನವದೆಹಲಿ: ಸೋಷಿಯಲ್ ಮೀಡಿಯಾ ಮೂಲಕ ದ್ವೇಷಪೂರಿತ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂಥ ಸಂದೇಶಗಳು ಪೋಸ್ಟ್​ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಈಗ ಮತ್ತೊಂದು ಎಚ್ಚರಿಕೆ ರವಾನೆಯಾಗಿದೆ.

ದ್ವೇಷಕಾರಿ ಪೋಸ್ಟ್​ಗಳನ್ನು ನಿಯಂತ್ರಿಸುವ ಸಂಬಂಧ ಫೇಸ್​ಬುಕ್​ ಉದ್ದೇಶಪೂರ್ವಕವಾಗಿಯೇ ನಿರಾಸಕ್ತಿ ವಹಿಸುತ್ತಿದೆ ಎಂಬ ಆರೋಪವನ್ನು ಹೊರಿಸಿದ್ದ ದೆಹಲಿ ಸದನ ಸಮಿತಿಯು ಫೇಸ್​ಬುಕ್​ ಇಂಡಿಯಾದ ಮುಖ್ಯಸ್ಥರು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿತ್ತು.

ಇದೀಗ ಭಾರತದ ಮುಖ ಚುನಾವಣಾ ಆಯುಕ್ತ ಸುನಿಲ್​ ಅರೊರಾ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಸೋಷಿಯಲ್​ ಮೀಡಿಯಾದ ದುರ್ಬಳಕೆ ತಡೆಯುವಲ್ಲಿ ವಿಫಲವಾದರೆ ಅಂಥ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳನ್ನೇ ಹೊಣೆ ಆಗಿಸಲಾಗುವುದು ಎಂದಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೀಗೊಂದು ಎಚ್ಚರಿಕೆ ಸಂದೇಶ ರವಾನಿಸಿರುವ ಅವರು, ಹಗೆತನದ ಪೋಸ್ಟ್​ ಹಾಕುವುದು ಮುಂತಾದವುಗಳ ಮೂಲಕ ಸೋಷಿಯಲ್ ಮೀಡಿಯಾದ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು ಎಂದು ರಾಜಕೀಯ ಪಕ್ಷಗಳು ಹಾಗೂ ಅದರ ಅಭ್ಯರ್ಥಿಗಳಿಗೂ ಆಯೋಗ ಸೂಚನೆ ನೀಡಿದೆ ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net