ಚಿತ್ರ ವಿ-ಚಿತ್ರ: ಬೀದಿನಾಯಿಗಳಿಗೆ ಕ್ಷೌರಸೇವೆ

sudina 1
Published on

ನವದೆಹಲಿ: ಸಾಮಾನ್ಯವಾಗಿ ಅಪರಿಚಿತ ನಾಯಿಗಳನ್ನು ಕಂಡರೆ ಭಯಪಡುವವರೇ ಹೆಚ್ಚು. ಜತೆಗೆ ಅವು ಜೋರಾಗಿ ಬೊಗಳತೊಡಗಿದರಂತೂ ಅಲ್ಲಿ ನಿಲ್ಲುವುದೂ ಅಪಾಯಕಾರಿ ಎನಿಸುವುದು ಸಹಜ. ಆದರೆ ಥಾಯ್ಲೆಂಡ್​ನ

ಕ್ರೈಂಗ್​ ಕಾಯ್ ಎಂಬ ಶ್ವಾನಪ್ರಿಯ ವ್ಯಕ್ತಿ ಬೀದಿನಾಯಿಗಳನ್ನು ಹುಡುಕಿ ಅವುಗಳ ಕ್ಷೌರ ಮಾಡುತ್ತಾರೆ. ಲಾಕ್​ಡೌನ್ ಸಂದರ್ಭದಲ್ಲಿ ತನ್ನ ಕೆಲಸ ಮಾಡಲು ಅವಕಾಶ ಸಿಗದಿದ್ದರೂ, ಅದು ಮುಗಿದ ಬಳಿಕ ಬೀದಿನಾಯಿಗಳನ್ನು ಹುಡುಕಿಕೊಂಡು ಹೋಗಿ ಅವುಗಳ ಕೂದಲನ್ನು ಟ್ರಿಮ್ ಮಾಡಿದ್ದಾರೆ.

ತನ್ನನ್ನು ‘ಬ್ಲಾಕ್ ಶೀಪ್ ಆಫ್ ದ ಡಾಗ್ ಗ್ರೂಮಿಂಗ್ ಬಿಜಿನೆಸ್’ ಎಂದು ಕರೆದುಕೊಳ್ಳುವ ಇವರು, ‘ಬಿರುಬೇಸಿಗೆಯ ವೇಳೆ ಮೈತುಂಬ ಕೂದಲು ಬೆಳೆದರೆ ಅವುಗಳಿಗೆ ಕಿರಿಕಿರಿಯಾಗುತ್ತದೆ. ಕೂದಲು ಟ್ರಿಮ್ ಮಾಡಿದರೆ ಅವು ಹಗುರಾಗುತ್ತವೆ. ನೋಡಲೂ ಅಂದವಾಗಿ ಕಾಣುತ್ತವೆ’ ಎನ್ನುತ್ತಾರೆ. ಕಳೆದ ವಾರ ಒಂದೇ ದಿನದಲ್ಲಿ 80 ನಾಯಿಗಳಿಗೆ ಕ್ಷೌರ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net