ಸ್ಟ್ರಾಟೊಸ್ಪಿಯರಿಕ್ ಏರ್​ಷಿಪ್ ಪರೀಕ್ಷೆ ಯಶಸ್ವಿ

Untitled design (3)
Published on

ನವದೆಹಲಿ: ಭಾರತದ ಸೇನೆಯ ಕಣ್ಗಾವಲು ವೃದ್ಧಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿರುವ ಸ್ಟ್ರಾಟೊಸ್ಪಿಯರಿಕ್ ಏರ್​ಷಿಪ್ ಪ್ಲ್ಯಾಟ್​ಫಾರ್ಮ್​ನ ಚೊಚ್ಚಲ ಪರೀಕ್ಷಾರ್ಥ ಹಾರಾಟ ಶನಿವಾರ ಯಶಸ್ವಿಯಾಗಿದೆ. ಮಧ್ಯಪ್ರದೇಶದ ಶಿಯೊಪುರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಈ ಪರೀಕ್ಷಾರ್ಥ ಹಾರಾಟ ನಡೆಸಿದೆ. ನಿಗದಿತ ಪೇಲೋಡ್​ನೊಂದಿಗೆ 17 ಕಿ.ಮೀ. ಎತ್ತರದಲ್ಲಿ ಒಟ್ಟು 62 ನಿಮಿಷಗಳ ಕಾಲ ಈ ಹಾರಾಟ ನಡೆಯಿತು. ಭವಿಷ್ಯದಲ್ಲಿನ ಅತಿ ಎತ್ತರದ ಏರ್​ಷಿಫ್ ಫ್ಲೈಟ್​ಗಳ ಫಿಡೆಲಿಟಿ ಸಿಮ್ಯುಲೇಷನ್ ಮಾಡೆಲ್​ಗಳ ತಯಾರಿಗೆ ಈ ಹಾರಾಟದಿಂದ ಲಭಿಸಿದ ಡೇಟಾ ಬಳಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸ್ಟ್ರಾಟೊಸ್ಪಿಯರಿಕ್ ಏರ್​ಷಿಪ್  ಪ್ಲ್ಯಾಟ್​ಫಾರ್ಮ್​ನ ಭಾರತದ ಭೂ ವೀಕ್ಷಣೆ, ಗುಪ್ತಚರ, ಕಣ್ಗಾವಲು ಹಾಗೂ ವಿಚಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ವ್ಯವಸ್ಥೆ ಆಗಿದೆ. ಇಂಥದ್ದೊಂದು ಸಂಕೀರ್ಣ ವ್ಯವಸ್ಥೆ ಅಭಿವೃದ್ಧಿಪಡಿಸಿಕೊಂಡಿರುವ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅಲ್ಲದೆ, ಪಹಲ್ಗಾಮ್ ದಾಳಿಯಿಂದಾಗಿ ಉಂಟಾಗಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಿಗೇ ಇಂಥದ್ದೊಂದು ಪರೀಕ್ಷಾರ್ಥ ಹಾರಾಟ ನಡೆದಿರುವುದು ಗಮನ ಸೆಳೆದಿದೆ.

‘ವಾಯುಮಂಡಲದ ಎತ್ತರದಲ್ಲಿ ಬಹುಕಾಲ ವಾಯುಗಾಮಿಯಾಗಿ ಉಳಿಯಬಲ್ಲ ಗಾಳಿಗಿಂತಲೂ ಹಗುರವಾದ ಎತ್ತರದ ವೇದಿಕೆಯ ವ್ಯವಸ್ಥೆ ಕಂಡುಕೊಳ್ಳುವಲ್ಲಿ ಇದು ಮಹತ್ವದ ಮೈಲಿಗಲ್ಲು’ ಎಂದು ಡಿಆರ್​ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್ ಹೇಳಿದ್ದಾರೆ. ಈ ಪರೀಕ್ಷಾರ್ಥ ಹಾರಾಟದ ಯಶಸ್ಸಿನೊಂದಿಗೆ ಇಂಥ ವ್ಯವಸ್ಥೆ ಹೊಂದಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿ, ಡಿಆರ್​ಡಿಒಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಆಗ್ರಾ ಮೂಲದ ಏರಿಯಲ್ ಡೆಲಿವರಿ ರಿಸರ್ಚ್ ಆಂಡ್ ಡೆವಲಪ್​ವೆುಂಟ್ ಎಸ್ಟ್ಯಾಬ್ಲಿಷ್ ​ವೆುಂಟ್ ಈ ಏರ್​ಷಿಪ್ ಪ್ಲಾ್ಯಟ್​ಫಾಮ್ರ್ ಅಭಿವೃದ್ಧಿಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net