ವಿಜಯೇಂದ್ರ, ಸುಧಾಕರ್​ಗೆ ವ್ಯೂಹ ಹೊಣೆ: ಜನಮನ ಗೆಲ್ಲಲು ತಂತ್ರಗಾರಿಕೆ ಪ್ರಣಾಳಿಕೆ ತಯಾರಿ, ಸಮಾವೇಶ ಸಂಘಟನೆ

BY Sud
Published on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ವಿಜಯರೇಖೆ ದಾಟಿಸಲು ಬಗೆಬಗೆಯ ತಂತ್ರ ರೂಪಿಸುತ್ತಿರುವ ಆಡಳಿತಾರೂಢ ಬಿಜೆಪಿಯು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ಗೆ ಪ್ರಮುಖ ಜವಾಬ್ದಾರಿ ನೀಡಿದೆ. ಯಾರು ಯಾವುದೇ ರೀತಿ ತರ್ಕ ಮಾಡಿದರೂ, ನಾಯಕರ ನಡುವೆ ‘ತಂದುಹಾಕಲು’ ಪ್ರಯತ್ನಿಸಿದರೂ ಪಕ್ಷದ ಆಸ್ತಿಯಾಗುವ ಕ್ರಿಯಾಶೀಲ, ಚಾಣಾಕ್ಷ ನಾಯಕರನ್ನು ನಾವು ಬಿಟ್ಟುಕೊಡು ವುದಿಲ್ಲ ಎಂದು ವರಿಷ್ಠರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಚುನಾವಣೆಗೆ ಜನ ಸಮುದಾಯ ಒಗ್ಗೂಡಿಸಿ ಸಂಘಟನೆ ಕಟ್ಟಲು ಬಿ.ವೈ. ವಿಜಯೇಂದ್ರ ಅವರನ್ನು ಮತ್ತು ಬೌದ್ಧಿಕ ತಂತ್ರಗಾರಿಕೆಗೆ ಸುಧಾಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿದೆ. ಚುನಾವಣೆಗಾಗಿ ಪಕ್ಷವು 4 ಹಂತದ ಯಾತ್ರೆ ಸಂಘಟಿಸುತ್ತಿದೆ. ಅದೇ ರೀತಿ ಮೋರ್ಚಾಗಳ ಜಿಲ್ಲಾ ಸಮಾವೇಶ, ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ, ಪ್ರಣಾಳಿಕೆ ತಯಾರಿಗೆ ಸಮಿತಿ ರಚಿಸಲಾಗಿದೆ.

ಈ ಸಮಿತಿಯಲ್ಲಿ ವಿಜಯೇಂದ್ರ, ಕೆ. ಸುಧಾಕರ್, ಸಿ.ಸಿ. ಪಾಟೀಲ್ ಪ್ರಮುಖ ಸ್ಥಾನ ನಿಭಾಯಿಸುತ್ತಿದ್ದಾರೆ. ಒಬಿಸಿ ಮೋರ್ಚಾ, ಎಸ್ಸಿ, ಎಸ್​ಟಿ, ಮಹಿಳಾ, ಯುವ, ಅಲ್ಪಸಂಖ್ಯಾತ ಮೋರ್ಚಾದಿಂದ ಜಿಲ್ಲಾವಾರು ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಈ ಸಮಾವೇಶಗಳನ್ನು ನಡೆಸಲು ವಿಜಯೇಂದ್ರ ಸಂಚಾಲಕ ರಾಗಿರುತ್ತಾರೆ. ಇವರೊಂದಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಯಶಪಾಲ್ ಸುವರ್ಣ ಸಹಸಂಚಾಲಕ ರಾಗಿರುತ್ತಾರೆ. ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ ನಡೆಸುತ್ತಿದ್ದು, ಕೆ.ಸುಧಾಕರ್ ಇದರ ಸಂಚಾಲಕರಾದರೆ, ಸಹಸಂಚಾಲಕರಾಗಿ ಶಿಕ್ಷಣ ಸಚಿವ ನಾಗೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಸುರೇಶ್​ಕುಮಾರ್ ಸೇರಿದಂತೆ ಐವರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಐದು ವಿವಿಧ ಪ್ರಕೋಷ್ಠಗಳ ಪ್ರಮುಖರಿಗೆ ಸ್ಥಾನ ನೀಡಲಾಗಿದೆ. ಪ್ರಣಾಳಿಕೆಗಾಗಿ ಈ ತಂಡ ವಿವಿಧ ವರ್ಗ, ಸಮುದಾಯಗಳೊಂದಿಗೆ ಸಮಾಲೋಚಿಸಿ ಜನರ ನಾಡಿಮಿಡಿತವನ್ನು ಕಟ್ಟಿಕೊಡಲಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಬೇಕೆಂಬ ಉದ್ದೇಶದಿಂದ ವಿವಿಧ ಮೋರ್ಚಾಗಳ ಸಮಾವೇಶವನ್ನು ಯಶಸ್ವಿಯಾಗಿ ಮಾಡಲಾಗುವುದು. | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಲ್ಲ ಸಮುದಾಯ,ವರ್ಗಗಳ ಆಶೋತ್ತರಕ್ಕೆ ಸ್ಪಂದಿಸುವ, ‘ನವಭಾರತಕ್ಕಾಗಿ ನವ ಕರ್ನಾಟಕ’ ಎಂಬ ನಮ್ಮ ಧ್ಯೇಯಕ್ಕೆ ಪೂರಕವಾಗುವ ‘ಸರ್ವ ರ್ಸ³, ಸರ್ವ ವ್ಯಾಪಿ’ ಪ್ರಣಾಳಿಕೆ ರೂಪಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ. | ಡಾ.ಕೆ. ಸುಧಾಕರ್ ಆರೋಗ್ಯ ಸಚಿವ

ಪ್ರಮುಖಾಂಶ

  • ಬಿಜೆಪಿಯೊಳಗೆ ನಾಯಕತ್ವ ಬರವಿಲ್ಲ, ಹೊಸ ರಕ್ತದ ಹರಿವಿಗೆ ಅಡೆತಡೆಯಿಲ್ಲ. ಎಮರ್ಜಿಂಗ್ ನಾಯಕತ್ವಕ್ಕೆ ಸವಾಲೆನಿಸುವ, ವಿಭಿನ್ನ ಚಿಂತನೆಯನ್ನು ಓರೆಗೆ ಇನ್ನಷ್ಟು ಸದೃಢಗೊಳಿಸುವ ಪ್ರಯತ್ನ.
  • ರಾಜಕೀಯ ನಿರ್ಣಯಗಳು, ತಂತ್ರಗಾರಿಕೆಗಳು ಏನೇ ಇರಲಿ, ಪಕ್ಷದ ವೇದಿಕೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂಬ ಸಂದೇಶ
  • ಮೂಲ-ವಲಸಿಗರೆಂಬ ಚುನಾವಣಾ ಕಾಲಕ್ಕೂ ಮುಂದುವರಿಸುವಂತಿಲ್ಲ ಎಂಬ ಎಚ್ಚರಿಕೆ. ಪರಸ್ಪರ ಅಪನಂಬಿಕೆ ನಿವಾ ರಣೆ, ಒಡಕಿನ ಲಾಭ ಪಡೆಯುವುದಕ್ಕೂ ಬ್ರೇಕ್
  • ಸ್ವಕ್ಷೇತ್ರದಲ್ಲಿ ಗೆದ್ದು, ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವವರಿಗೆ ಹೆಚ್ಚಿನ ಜವಾಬ್ದಾರಿ, ಚುನಾವಣಾ ತಂತ್ರಗಾರಿಕೆ ನೈಪುಣ್ಯಕ್ಕೆ ಉತ್ತೇಜನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net