ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಪರ್ಧೆ

triveni (1)
Published on

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಸಖಿ ಹಿರಿಯ ಕಾದಂಬರಿಗಾರ್ತಿ ದಿ. ತ್ರಿವೇಣಿ ಜನ್ಮದಿನ ಹಿನ್ನೆಲೆಯಲ್ಲಿ ‘ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಪರ್ಧೆ-2023’ ಆಯೋಜಿಸಿದೆ.

ಹತ್ತು ಪುಟಗಳ ಮಿತಿಯಲ್ಲಿ ಮನೋವೈಜ್ಞಾನಿಕ ಕಥೆಗಳನ್ನು ಈ ತಿಂಗಳ ಆ.25ರೊಳಗೆ shylajasuresh@gmail.com ಗೆ ಕಳುಹಿಸಬಹುದಾಗಿದೆ. ಉತ್ತಮ ಕಥೆಗಳನ್ನು ಬರೆದವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುತ್ತದೆ. ಆಯ್ಕೆಯಾದ ಕಥೆಗಳನ್ನು ಸಾಹಿತ್ಯ ಸಖಿ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಸ್ವತ: ಕೈಬರಹದಲ್ಲಿ ಬರೆದು ಅಂಚೆ ಮೂಲಕ ಕಳುಹಿಸಬಹುದು. ವಿಳಾಸ: ಶೈಲಜಾ ಸುರೇಶ್, ಸಂಚಾಲಕರು, ಲೇಖಿಕಾ ಸಾಹಿತ್ಯ ವೇದಿಕೆ, ನಂ.50, 10ನೇ ಅಡ್ಡರಸ್ತೆ, ಜೆ.ಪಿ.ನಗರ ಮೊದಲ ಹಂತ, ಬೆಂಗಳೂರು-78. ಹೆಚ್ಚಿನ ವಿವರಕ್ಕೆ ಮೊ: 9916378955 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net