ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ; ಬೈಕ್​ಗೆ ಬೆಂಕಿ, ಪೊಲೀಸರಿಂದ ಲಾಠಿ ಪ್ರಹಾರ

Stone
Published on

ಕೋಲಾರ: ರಾಜ್ಯದಲ್ಲಿ ಹಿಜಾಬ್​, ಹಲಾಲ್​ ಬಳಿಕ ಲೌಡ್​ಸ್ಪೀಕರ್ ಸಂಬಂಧಿತವಾಗಿ ವಿವಾದ-ವಾಗ್ವಾದಗಳು ಬಹಳಷ್ಟು ನಡೆಯುತ್ತಿರುವ ಸಂದರ್ಭದಲ್ಲೇ ಕೋಮುಸಾಮರಸ್ಯ ಕದಡುವಂಥ ಪ್ರಕರಣವೊಂದು ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಈ ಘಟನೆ ನಡೆದಿದೆ.

ಮುಳಬಾಗಿಲಿನಲ್ಲಿ ನಡೆಯುತ್ತಿದ್ದ ಶ್ರೀರಾಮ ಶೋಭಾಯಾತ್ರೆ ವೇಳೆ ಈ ಘಟನೆ ನಡೆದಿದೆ. ಮುಳಬಾಗಿಲು ಪಟ್ಟಣದಿಂದ ಆವನಿ ಕಡೆಗೆ ಹೊರಟಿದ್ದ ಶೋಭಾಯಾತ್ರೆ ಜಹಾಂಗೀರ್ ‌ಮೊಹಲ್ಲ ಸಮೀಪ ತಲುಪಿದಾಗ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಕಲ್ಲು ತೂರಾಟ ನಡೆಸಿದ್ದಲ್ಲದೆ, ಈ ಸಂದರ್ಭದಲ್ಲಿ ಒಂದು ಬೈಕ್​ಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಬಂದೋಬಸ್ತ್​ಗಾಗಿ ಸ್ಥಳದಲ್ಲಿ ಹೆಚ್ವಿನ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net