

ಭೋಪಾಲ್: ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆ ಸಮಯದಲ್ಲಿ ನಡೆದ ಕಲ್ಲು ತೂರಾಟ ಮತ್ತು ಘರ್ಷಣೆಗೆ ಸಂಬಂಧಿಸಿದಂತೆ 12 ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, 39 ಜನರನ್ನು ಬಂಧಿಸಲಾಗಿದೆ. ಒಟ್ಟು 158 ಜನರನ್ನು ಈ ಪ್ರಥಮ ವರ್ತಮಾನ ವರದಿಗಳಲ್ಲಿ ಹೆಸರಿಸಲಾಗಿದ್ದು, ಗುರುತು ಸಿಕ್ಕಿಲ್ಲದ ಇನ್ನೂ 200 ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.
ಅಕ್ಟೋಬರ್ 19 ರಂದು ರಾಜ್ಯದ ಧಾರ್, ಜಬಲ್ಪುರ್ ಮತ್ತು ಬರ್ವಾನಿ ಜಿಲ್ಲೆಗಳಲ್ಲಿ ಈದ್ ಮಿಲಾದ್ ಉನ್ ನಬಿ ಆಚರಣೆಯ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಘರ್ಷಣೆಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ 6 ಜನ ಪೊಲೀಸ್ ಸಿಬ್ಬಂದಿಗೂ ಪೆಟ್ಟು ಬಿದ್ದಿತ್ತು ಎಂದು ಜಬಲ್ಪುರ ಎಸ್ಪಿ ತಿಳಿಸಿದ್ದಾರೆ. (ಏಜೆನ್ಸೀಸ್)