ಹತಾಶರಾದ ತೃಣಮೂಲ ಕಾಂಗ್ರೆಸ್​ ಬೆಂಬಲಿಗರಿಂದ ಸುವೇಂದು ಅಧಿಕಾರಿ ಕಾರಿನ ಮೇಲೆ ಕಲ್ಲೆಸೆತ!

suvendu
Published on

ನವದೆಹಲಿ: ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ರೋಚಕ ಗೆಲುವಿನಿಂದ ಹತಾಶರಾದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿನತ್ತ ಕಲ್ಲು ಎಸೆದಿದ್ದಾರೆ.
ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿಯ ಪ್ರತಿಸ್ಪರ್ಧಿ ಆಗಿದ್ದ ಸುವೇಂದು ಕೊನೆಯ ಹಂತದಲ್ಲಿ ಸಿನಿಮೀಯ ರೀತಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ದೀದಿಯನ್ನು ಸೋಲಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಬಿಜೆಪಿಯನ್ನು ಭಾರಿ ಅಂತರದಲ್ಲಿ ಹಿಂದಕ್ಕೆ ಹಾಕಿ ಮುನ್ನುಗ್ಗಿದ್ದರೂ ನಂದಿಗ್ರಾಮದಲ್ಲಿ ಮಮತಾಗೆ ಸೋಲಾದ್ದರಿಂದ ಟಿಎಂಸಿ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದರು. ಹೀಗಾಗಿ ಚುನಾವಣಾಧಿಕಾರಿಯ ಕಚೇರಿಯಿಂದ ಸುವೇಂದು ಅಧಿಕಾರಿ ಹೊರಡುತ್ತಿದ್ದಂತೆ ಅವರ ಕಾರಿನತ್ತ ಕಲ್ಲುಗಳನ್ನು ಎಸೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net