ರಾಜ್ಯಕ್ಕೆ ಬರಲಿದೆ 30 ಟನ್ ಆಕ್ಸಿಜನ್: ಚುನಾವಣೆ ಫಲಿತಾಂಶದ ನಡುವೆಯೂ ಸಿಎಂ-ಸಿಎಸ್ ಸಭೆ

Oxygen
Published on

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿನ ಉಪ ಚುನಾವಣೆ ಫಲಿತಾಂಶಗಳ ನಡುವೆಯೂ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಮಾತ್ರವಲ್ಲ ರಾಜ್ಯಕ್ಕೆ ಅತಿ ಅಗತ್ಯವಿರುವ ಆಮ್ಲಜನಕ ಪೂರೈಕೆ ಸುಸೂತ್ರಗೊಳಿಸಲು 30 ಟನ್ ಆಕ್ಸಿಜನ್ ತರಿಸಿಕೊಳ್ಳಲು ಮುಂದಾಗಿದ್ದಾರೆ.

ಏರ್​ಲಿಫ್ಟ್​ ಮೂಲಕ ಭುವನೇಶ್ವರಕ್ಕೆ ಎರಡು ಟ್ಯಾಂಕರ್ ರವಾನೆಯಾಗಿದ್ದು, ಎರಡರಲ್ಲಿ ಒಟ್ಟು 30 ಟನ್​ ಆಕ್ಸಿಜನ್ ಇವೆ. ಈ ಟ್ಯಾಂಕರ್​ಗಳು ಭುವನೇಶ್ವರದಿಂದ ರಸ್ತೆ ಮಾರ್ಗವಾಗಿ ರಾಜ್ಯಕ್ಕೆ ತರಲಾಗುವುದು.

ನಾಳೆ ಬೆಳಗ್ಗೆ ಭುವನೇಶ್ವರದಿಂದ ಹೊರಡುವ ಈ ಟ್ಯಾಂಕರ್​ಗಳು ಮಂಗಳವಾರ ಅಥವಾ ಬುಧವಾರ ಬೆಂಗಳೂರಿಗೆ ಬಂದು ತಲುಪಲಿವೆ. ಆ ಬಳಿಕ ರಾಜ್ಯದಲ್ಲಿನ ಆಮ್ಲಜನಕದ ಕೊರತೆ ಸಮಸ್ಯೆ ಬಹಳಷ್ಟು ತಗ್ಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net