More

    ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇

    ಬೆಂಗಳೂರು: ಎಷ್ಟೇ ಲಾಕ್​ಡೌನ್​, ನಿರ್ಬಂಧ ಎಂದರೂ ಬೀದಿಗಿಳಿದು ನಾನಾ ಕಾರಣ ಹೇಳಿ ಓಡಾಡುವ ಕೆಲವರನ್ನು ನೋಡಿ ಬೇಸತ್ತಿರುವ ಪೊಲೀಸರು, ಇದೀಗ ಎಲ್ಲರೂ ಒಳಗೇ ಇರಿ ಎಂದು ಮತ್ತೊಮ್ಮೆ ವಿನಂತಿ ಮಾಡಿಕೊಂಡಿದ್ದಾರೆ. ಯಾಕೆ ಒಳಗಿರಬೇಕು ಎಂಬುದನ್ನೂ ಅವರು ಸಕಾರಣವಾಗಿ ಹೇಳಿಕೊಂಡಿದ್ದಾರೆ.

    ‘ಪೊಲೀಸರ ಜೊತೆ ವಾದ ಮಾಡಬೇಡಿ. ನೀವು ಹೊರಗೆ ರಸ್ತೆಗೆ ಇಳಿದಿರುವುದಕ್ಕೆ ನೂರು ಕಾರಣ ಕೊಡಬಹುದು. ಆದರೆ ನೀವು ಮನೆಯಲ್ಲೇ ಇರಲು ನಾವು ಕೊಡುವ ಒಂದೇ ಒಂದು ಕಾರಣ ಎಂದರೆ ಅದು ನಿಮ್ಮ ಸುರಕ್ಷತೆ. ನಮಗೂ ಆಯ್ಕೆ ಇದ್ದಿದ್ದರೆ ನಾವೂ ಮನೆಯಲ್ಲೇ ಇರುತ್ತಿದ್ದೆವು, ಕೋವಿಡ್ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಆರ್ಡರ್ ನಿಭಾಯಿಸಲು ಬಂದ 120 ಪೊಲೀಸರನ್ನು ನಾವು ಕಳೆದುಕೊಂಡಿರುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಅರ್ಥಾತ್, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಧಿಕೃತ ಟ್ವಿಟರ್ ಹ್ಯಾಂಡಲ್​ನಿಂದ ಹೀಗೆ ಮನವಿ ಮಾಡಿಕೊಳ್ಳಲಾಗಿದೆ.

    ‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಂತೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಹೋದ್ಯೋಗಿಗಳ ಪೈಕಿ ಹಲವರನ್ನು ಕಳೆದುಕೊಂಡು ನಮಗೆ ದುಃಖವಾಗಿದೆ. ಆದರೂ ನಿಮ್ಮ ಸುರಕ್ಷೆ ನಮ್ಮ ಬದ್ಧತೆ, ಲಾಕ್​ಡೌನ್​ ನಿರ್ವಹಣೆಯಲ್ಲಿ ನಾವು ಮುಂಚೂಣಿಯಲ್ಲೇ ಮುಂದುವರಿಯುತ್ತೇವೆ, ದಯವಿಟ್ಟು ಮನೆಯಲ್ಲೇ ಇದ್ದು ಸಹಕರಿಸಿ’ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಜನರಲ್ಲಿ ಟ್ವೀಟ್ ಮೂಲಕ ಮಾಡಿಕೊಂಡಿರುವ ಮನವಿಗೆ ರಿಟ್ವೀಟ್ ಮಾಡಿರುವ ಡಿಜಿಪಿ ಕೂಡ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ಕೋರಿಕೊಂಡಿದ್ದಾರೆ.

    ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ಕೋವಿಡ್ ವಿರುದ್ಧ ಫೀಲ್ಡ್​ಗೆ ಇಳೀತಾರಂತೆ ಕೊಹ್ಲಿ ದಂಪತಿ; ‘ನೀವೂ ಕೈಜೋಡಿಸಿ..’ ಅಂದ್ರು ಗಂಡನ ಪರವಾಗಿ ಹೆಂಡತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts