ಕಲ್ಲಿನ ದಿಮ್ಮಿ ಕಳ್ಳತನ

Published on
ಚಿಂತಾಮಣಿ: ನಗರದ ಚಿಂತಾಮಣಿ-&ಬೆಂಗಳೂರು ರಸ್ತೆಯ ಸಂತೇಕಲ್ಲಹಳ್ಳಿಯ ಹೊರವಲಯದ ಕಲ್ಲಿನ ಕ್ವಾರಿಯಲ್ಲಿದ್ದ ಮೂರು ಕಲ್ಲಿನ ದಿಮ್ಮಿಗಳನ್ನು ಕಳವು ಮಾಡಲಾಗಿದೆ ಎಂದು ಉದ್ಯಮಿ ದೀಪಕ್​ ಪಿ.ರಾವ್​ ಮಂಗಳವಾರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. 1992ರಲ್ಲಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಲ್ಲು ಗಣಿ ಗುತ್ತಿಗೆ ಹಾಗೂ ಲೈಸೆನ್ಸ್​ ಪಡೆದು ಕಲ್ಲಿನ ಕ್ವಾರಿ ನಡೆಸುತ್ತಿದ್ದು, ವಿಸ್ತರಣಾ ಅನುಮತಿಗಾಗಿ 2017ರಲ್ಲಿ ಅರ್ಜಿ ನೀಡಿದ್ದು ಅನುಮತಿ ದೊರೆಯದ ಕಾರಣ ಸ್ಥಳದಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. 2017ರಲ್ಲಿ ಕ್ವಾರಿಯಲ್ಲಿ ತೆಗೆದಿದ್ದ ಮೂರು ಕಲ್ಲಿನ ದಿಮ್ಮಿಗಳು ಜು.28 ರಂದು ಕಾಣೆಯಾಗಿರುವುದಾಗಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net