ಮಂಗಳವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಷೇರುಗಳು: ಬುಧವಾರವೂ ಈ ಸ್ಟಾಕ್​ಗಳು ಲಾಭ ಕೊಡುವ ನಿರೀಕ್ಷೆ

stock-3
Published on

ಮುಂಬೈ: ಮಾರುಕಟ್ಟೆಯ ಏರಿಳಿತದ ನಡುವೆಯೂ ಕೆಲವು ಪೆನ್ನಿ ಸ್ಟಾಕ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಮಂಗಳವಾರ ಕೆಲವು ಷೇರುಗಳಲ್ಲಿ ಶೇ. 20ರಷ್ಟು ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಈ ಷೇರುಗಳು ಅಪ್‌ಟ್ರೆಂಡ್‌ನಲ್ಲಿವೆ. ಈ ಪೆನ್ನಿ ಸ್ಟಾಕ್‌ಗಳು ಬುಧವಾರದ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಬಹುದಾಗಿದೆ.

ಖರೀದಿದಾರರು ಈ ಸ್ಟಾಕ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಬುಧವಾರದ ಮಾರುಕಟ್ಟೆಯಲ್ಲೂ ಏರಿಕೆ ಕಾಣಬಹುದಾದ ಈ ಷೇರುಗಳತ್ತ ಗಮನಹರಿಸೋಣ.

ಆದಿತ್ಯ ಕನ್ಸೂಮರ್​ ಮಾರ್ಕೆಟಿಂಗ್ (Aditya Consumer Marketing):

ಮಂಗಳವಾರ ಆದಿತ್ಯ ಕನ್ಸೂಮರ್​ ಮಾರ್ಕೆಟಿಂಗ್‌ ಷೇರುಗಳಲ್ಲಿ ಅಗಾಧವಾದ ಬೆಳವಣಿಗೆ ಕಂಡುಬಂದಿದೆ. ಈ ಸ್ಟಾಕ್ ಬೆಲೆ 20 ಪ್ರತಿಶತದಷ್ಟು ಹೆಚ್ಚಿದ ನಂತರ ರೂ 113.72 ರ ಮಟ್ಟ ತಲುಪಿತು. ಬುಧವಾರದ ವಹಿವಾಟಿನಲ್ಲೂ ಈ ಸ್ಟಾಕ್‌ನಲ್ಲಿ ಬುಲಿಶ್ ಟ್ರೆಂಡ್ ಕಾಣಬಹುದು, ಏಕೆಂದರೆ ಈ ಸ್ಟಾಕ್‌ನಲ್ಲಿ ಖರೀದಿದಾರರು ಸಕ್ರಿಯರಾಗಿದ್ದಾರೆ.

ಉಮಂಗ್ ಡೈರೀಸ್ ಲಿಮಿಟೆಡ್ (Umang Dairies Ltd):

ಈ ಷೇರು ಮಂಗಳವಾರದ ಮಾರುಕಟ್ಟೆಯಲ್ಲಿ ಶೇ. 20 ರಷ್ಟು ಏರಿಕೆ ಕಂಡು 97.75 ರೂ. ಮುಟ್ಟಿದೆ. ಈ ಸ್ಟಾಕ್ ಬುಧವಾರದ ಮಾರುಕಟ್ಟೆಯಲ್ಲೂ ಏರಿಕೆಯಾಗಬಹುದಾಗಿದೆ.

ನೀಲಾಚಲ ರಿಫ್ರ್ಯಾಕ್ಟರೀಸ್ (Nilachal Refractories):

ನೀಲಾಚಲ ರಿಫ್ರ್ಯಾಕ್ಟರೀಸ್ ಷೇರುಗಳ ಬೆಲೆ ಮಂಗಳವಾರ 20 ಪ್ರತಿಶತದಷ್ಟು ಏರಿಕೆ ಕಂಡು, ರೂ 48.02 ಮಟ್ಟ ತಲುಪಿದೆ. ಬುಧವಾರದ ವಹಿವಾಟಿನ ಅವಧಿಯಲ್ಲಿ ಉತ್ತಮ ಸಂಖ್ಯೆಯಲ್ಲಿ ಖರೀದಿದಾರರು ಈ ಸ್ಟಾಕ್‌ನತ್ತ ಮುಖ ಮಾಡಬಹುದು. ಈ ಸ್ಟಾಕ್ ಮತ್ತೆ ಬೆಳವಣಿಗೆಯನ್ನು ತೋರಿಸಬಹುದು.

ಆಪ್ಟಿಮಸ್ ಫೈನಾನ್ಸ್ (Optimus Finance):

ಈ ಸ್ಟಾಕ್‌ನಲ್ಲಿ ಅಪ್‌ಟ್ರೆಂಡ್​ನಲ್ಲಿ ಇದೆ. ಖರೀದಿದಾರರು ನಿರಂತರವಾಗಿ ಇದರಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ, ಈ ಸ್ಟಾಕ್ 20 ಪ್ರತಿಶತದಷ್ಟು ಹೆಚ್ಚಿದ ನಂತರ ರೂ 120.64 ತಲುಪಿದೆ. ಈ ಸ್ಟಾಕ್‌ನ ಈ ಏರಿಕೆಯು ಬುಧವಾರವೂ ಮುಂದುವರಿಯಬಹುದು.

ವಾಸ್ವಾನಿ ಇಂಡಸ್ಟ್ರೀಸ್ ಲಿಮಿಟೆಡ್ (Vaswani Industries Ltd):

ಈ ಷೇರುಗಳಲ್ಲಿ ಸಕಾರಾತ್ಮಕ ಭಾವನೆಗಳಿವೆ. ಮಂಗಳವಾರದ ವಹಿವಾಟಿನಲ್ಲಿ ಈ ಷೇರು ಬೆಲೆ 46.80 ರೂ. ಮುಟ್ಟಿತು. ಈ ಅವಧಿಯಲ್ಲಿ ಇದು ಶೇ. 20ರಷ್ಟು ಏರಿಕೆ ಕಂಡಿದೆ. ಬುಧವಾರದ ಮಾರುಕಟ್ಟೆಯಲ್ಲೂ ಈ ಷೇರು ಏರಿಕೆ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net