More

    156ರಿಂದ 14 ರೂಪಾಯಿಗೆ ಕುಸಿದಿರುವ ಷೇರಿಗೆ ಈಗ ಬೇಡಿಕೆ: ಒಂದೇ ತಿಂಗಳಲ್ಲಿ 109% ಏರಿಕೆ; ಮಂಗಳವಾರ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದ್ದೇಕೆ?

    ಮುಂಬೈ: 14 ರೂಪಾಯಿ ಈ ಷೇರು ನಿರಂತರವಾಗಿ ಅಪ್ಪರ್ ಸರ್ಕಿಟ್‌ ಹಿಟ್​ ಆಗುತ್ತಿದೆ. ಕೇವಲ ಒಂದು ತಿಂಗಳಲ್ಲಿ ಈ ಷೇರಿನ ಬೆಲೆ 109% ರಷ್ಟು ಏರಿಕೆಯಾಗಿದೆ, ಈ ಷೇರಿನಲ್ಲಿ ಹೂಡಿಕೆ ಮಾಡಿದವರು ಸಾಕಷ್ಟು ಶ್ರೀಮಂತರಾಗಿದ್ದಾರೆ.
    ಇದು ಸರ್ವೇಶ್ವರ್ ಫುಡ್ಸ್ ಲಿಮಿಟೆಡ್ (Sarveshwar Foods Ltd) ಷೇರು. ಎಫ್‌ಎಂಸಿಜಿ ವಲಯದ ಪೆನ್ನಿ ಸ್ಟಾಕ್ ಇದಾಗಿದೆ. ಕಳೆದ ಒಂದು ತಿಂಗಳಿಂದ ತೀವ್ರ ಏರಿಕೆ ಕಾಣುತ್ತಿವೆ.

    ಮಂಗಳವಾರದ ಇಂಟ್ರಾಡೇ ವಹಿವಾಟಿನಲ್ಲಿ ಈ ಷೇರು ಶೇ. 5ರಷ್ಟು ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್ ಆಯಿತು. ಈ ಷೇರಿನ ಬೆಲೆ ಈಗ 14.85 ರೂಪಾಯಿ ತಲುಪಿದೆ. ಸರ್ವೇಶ್ವರ್ ಫುಡ್ಸ್ ಷೇರುಗಳು ಈ ಹಿಂದಿನ ವಹಿವಾಟಿನಲ್ಲಿಯೂ ಅಪ್ಪರ್ ಸರ್ಕ್ಯೂಟ್​ ತಲುಪಿದ್ದವು.

    ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಾಸ್ತವವಾಗಿ, ಸರ್ವೇಶ್ವರ್ ಫುಡ್ಸ್ ದೀರ್ಘಾವಧಿಯ ಅಭಿವೃದ್ಧಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ಹೆಚ್ಚಿಸಲು ನಿಧಿಯನ್ನು ಸಂಗ್ರಹಿಸಲು ಮುಂದಾಗಿದ್ದು, ಇದಕ್ಕಾಗಿ ಅನುಮೋದನೆ ಪಡೆದುಕೊಂಡಿದೆ.

    ಕಂಪನಿಯು ದೀರ್ಘಾವಧಿಯ ಅಭಿವೃದ್ಧಿಗಾಗಿ 9,8.94 ಕೋಟಿ ರೂ.ಗಳನ್ನು ಸಂಗ್ರಹಿಸಲು ಯೋಜಿಸಿದೆ, ಇದಕ್ಕಾಗಿ 10,20,00,000 ವಾರಂಟ್‌ಗಳನ್ನು ಪ್ರವರ್ತಕರಲ್ಲದ ಹೂಡಿಕೆದಾರರಿಗೆ ಪ್ರತಿ ವಾರಂಟ್‌ಗೆ 9.70 ರೂಪಾಯಿ ಬೆಲೆಯಲ್ಲಿ ನೀಡಲು ಮುಂದಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 1,467.25 ಕೋಟಿ ರೂ. ಇದೆ. ತ್ರೈಮಾಸಿಕ ಫಲಿತಾಂಶಗಳ ಪ್ರಕಾರ ಹಿಂದಿನ ಡಿಸೆಂಬರ್​ ತ್ರೈಮಾಸಿಕಕ್ಕೆ (Q3FY23) ಹೋಲಿಸಿದರೆ ಈ ಡಿಸೆಂಬರ್​ ತ್ರೈಮಾಸಿಕದಲ್ಲಿ (Q3FY24) ನಿವ್ವಳ ಮಾರಾಟವು 24.7 ಶೇಕಡಾ ಹೆಚ್ಚಾಗಿದೆ. ಇದೇ ರೀತಿ ನಿವ್ವಳ ಲಾಭವು ಶೇ.186.6ರಷ್ಟು ಏರಿಕೆಯಾಗಿ 4.93 ಕೋಟಿ ರೂಪಾಯಿ ತಲುಪಿದೆ.

    ಈ ಕಂಪನಿಯ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 156.90 ಇದ್ದರೆ, ಕನಿಷ್ಠ ಬೆಲೆ 4 ರೂಪಾಯಿ ಇದೆ.
    ಸರ್ವೇಶ್ವರ್ ಫುಡ್ಸ್ ಕಂಪನಿಯು ಬಾಸ್ಮತಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿಗಳ ತಯಾರಿಕೆ, ಸಂಸ್ಕರಣೆ, ವ್ಯಾಪಾರ ಮತ್ತು ಮಾರಾಟದಲ್ಲಿ ಪರಿಣತಿ ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದಿಂದ ಕಾರ್ಯನಿರ್ವಹಿಸುತ್ತದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸುತ್ತದೆ.

    ಟಿಸಿಎಸ್​, ಟಾಟಾ ಮೋಟರ್ಸ್​, ಸನ್​ ಫಾರ್ಮಾ ಷೇರು ಖರೀದಿ ಜೋರು: 305 ಅಂಕಗಳ ಏರಿಕೆಯೊಂದಿಗೆ ಸೂಚ್ಯಂಕ ಚೇತರಿಕೆ

    ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್ ಫಂಕ್ಷನ್​ ಮೆನು ಅದ್ಭುತ: 2500 ಭಕ್ಷ್ಯ, 250ಕ್ಕೂ ಹೆಚ್ಚು ಆಯ್ಕೆ, ಯಾವುದೇ ತಿನಿಸು ರಿಪೀಟ್ ಇಲ್ಲ

    7 ರೂಪಾಯಿ ಇದ್ದ ಷೇರು ಬೆಲೆ 80 ಪೈಸೆಗೆ ಕುಸಿತ: ಮಂಗಳವಾರ ಈ ಪೆನ್ನಿ ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts