

ಮುಂಬೈ: ಭಾರತ-ಅಮೆರಿಕ ವಾಣಿಜ್ಯ ಮಾತುಕತೆಗಳ ಪುನರಾರಂಭದಿಂದಾಗಿ ಮಂಗಳವಾರ ಷೇರು ಮಾರುಕಟ್ಟೆ ಚೇತರಿಕೆ ಕಂಡಿತು.
ದಿನದ ವಹಿವಾಟಿನ ಮಧ್ಯೆ 657.74 ಅಂಕ ಏರಿಕೆಯಾಗಿ 82,443.48ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 594.95 ಅಂಕಗಳ ಏರಿಕೆ ದಾಖಲಿಸಿ 82,380.69ರಲ್ಲಿ ಮುಕ್ತಾಯವಾಯಿತು. ನಿಫ್ಟಿ 169.90 ಅಂಕ ಏರಿಕೆಯಾಗಿ 25,239.10ಕ್ಕೆ ಮುಕ್ತಾಯಗೊಂಡಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,268.59 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಶೇ. 0.55ರಷ್ಟು ಕಡಿಮೆಯಾಗಿ ಬ್ಯಾರೆಲ್ಗೆ 67.07 ಡಾಲರ್ಗೆ ಇಳಿಕೆಯಾಗಿದೆ.