ಷೇರುಪೇಟೆ ಮತ್ತೆ ಭಾರಿ ಕುಸಿತ

ವಿಜಯವಾಣಿ (3)
Published on

ಮುಂಬೈ: ಗಳಿಕೆ ವೃದ್ಧಿ ಬಗ್ಗೆ ಅನಿಶ್ಚಿತತೆ, ವಿದೇಶಿ ಬಂಡವಾಳದ ಹೊರಹರಿವು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಸತತ ಎರಡನೇ ದಿನವಾದ ಗುರುವಾರವೂ ಶೇ. 1ರಷ್ಟು ಕುಸಿತ ದಾಖಲಿಸಿತು.

ಸೆನ್ಸೆಕ್ಸ್ 528.28 ಅಂಕ ಕೆಳಗಿಳಿದು 77,620ಕ್ಕೆ ತಲುಪಿತು. ದಿನದ ಮಧ್ಯಭಾಗದಲ್ಲಿ ಅದು 605 ಅಂಕ ಕುಸಿದಿತ್ತು. ನಿಫ್ಟಿ ಕೂಡ 162 ಅಂಕ ಕುಸಿದು 23,526ಕ್ಕೆ ತಲುಪಿತು. ಟಾಟಾ ಸ್ಟೀಲ್, ಜೊಮ್ಯಾಟೊ, ಎಲ್ ಆಂಡ್ ಟಿ, ಟಾಟಾ ಮೋಟರ್ಸ್, ಅದಾನಿ ಪೋರ್ಟ್ಸ್, ಟಿಸಿಎಸ್, ಎಚ್​ಡಿಎಫ್​ಸಿ ಬ್ಯಾಂಕ್, ಎನ್​ಟಿಪಿಸಿ ಷೇರುಗಳು ನಷ್ಟಕ್ಕೀಡಾದವು. ನೆಸ್ಲೆ, ಹಿಂದುಸ್ತಾನ್ ಯುನಿಲಿವರ್, ಮಹಿಂದ್ರಾ ಆಂಡ್ ಮಹಿಂದ್ರಾ, ಕೋಟಕ್ ಮಹಿಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್​ಟೆಲ್ ಷೇರುಗಳು ಲಾಭ ಗಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net