

ಮುಂಬೈ: ವಿದೇಶಿ ಹೂಡಿಕೆಯ ಹೊರಹರಿವು ಮತ್ತು ಬ್ಯಾಂಕಿಂಗ್ ಷೇರುಗಳ ಮಾರಾಟದ ಪರಿಣಾಮವಾಗಿ ಸತತ ಎರಡನೇ ದಿನವಾದ ಶುಕ್ರವಾರವೂ ಭಾರತೀಯ ಷೇರು ಮಾರುಕಟ್ಟೆ ಕುಸಿದಿದೆ. ದಿನದ ವಹಿವಾಟಿನ ಮಧ್ಯೆ 651.11 ಅಂಕ ಇಳಿದು 81,608.13ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 501.51 ಅಂಕ ಇಳಿಕೆಯೊಂದಿಗೆ 81,757.73ರಲ್ಲಿ ಸ್ಥಿರಗೊಂಡಿತು.
ನಿಫ್ಟಿ 143.05 ಅಂಕ ಇಳಿಕೆಯಾಗಿ 24,968.40ರಲ್ಲಿ ಮುಕ್ತಾಯಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 3,694.31 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ ಎಂದು ವಿನಿಮಯ ಕಚೇರಿ ತಿಳಿಸಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.92ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 70.16 ಡಾಲರ್ಗೆ ತಲುಪಿತು. ಗುರುವಾರವೂ ಸೆನ್ಸೆಕ್ಸ್ 375.24 ಅಂಕ ಕುಸಿದು 82,259.24ರಲ್ಲಿ ಸ್ಥಿರಗೊಂಡಿತ್ತು. ನಿಫ್ಟಿ 100.60 ಅಂಕ ಇಳಿಕೆಯಾಗಿ 25,111.45ಕ್ಕೆ ತಲುಪಿತ್ತು.