ಎರಡನೇ ದಿನವೂ ಷೇರುಪೇಟೆ ಇಳಿಕೆ

7-68375130af65f
Published on

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಮಂಗಳವಾರದ ಮಂದಗತಿ ಬುಧವಾರವೂ ಮುಂದುವರಿದಿದೆ. ಅತಿ ಹೆಚ್ಚು ಬಳಕೆಯ ಗ್ರಾಹಕ ವಸ್ತುಗಳ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್- ಎಫ್​ಎಂಸಿಜಿ) ಕಂಪನಿಯಾದ ಐಟಿಸಿಯ ಷೇರಿನ ಬೆಲೆ ಶೇ. 3 ಕುಸಿತವಾಗಿದ್ದು ಷೇರುಪೇಟೆಯ ಇಳಿಕೆಗೂ ಕಾರಣ

ವಾಯಿತು. ದಿನದ ವಹಿವಾಟಿನ ನಡುವೆ 307 ಅಂಕ ಇಳಿಕೆಯಾಗಿ 81,244ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 239 ಅಂಕ ಇಳಿಕೆ ದಾಖಲಿಸಿ 81,312ಕ್ಕೆ ಸ್ಥಿರವಾಯಿತು. ನಿಫ್ಟಿ 73 ಅಂಕ ಇಳಿಕೆಯಾಗಿ 24,752ಕ್ಕೆ ಸ್ಥಿರಗೊಂಡಿತು. ಎಫ್​ಎಂಸಿಜಿ, ಆಟೋಮೊಬೈಲ್, ಔಷಧೋದ್ಯಮ ಷೇರುಗಳು ನಷ್ಟ ಅನುಭವಿಸಿದರೆ ಬ್ಯಾಂಕಿಂಗ್, ಮಾಧ್ಯಮ, ಇಂಧನ ಕಂಪನಿಗಳ ಷೇರುಗಳು ಲಾಭ ಗಳಿಸಿದವು.

ಚಿನ್ನದ ಬೆಲೆ 500 ರೂಪಾಯಿ ಹೆಚ್ಚಳ

ನವದೆಹಲಿ: ಸಾಗರೋತ್ತರ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ ಐನೂರು ರೂ. ಏರಿಕೆಯಾಗಿದೆ. ಮಂಗಳವಾರ 10 ಗ್ರಾಂಗೆ 98,500 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 99 ಸಾವಿರ ರೂ.ಗೆ ಮಾರಾಟವಾಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 98 ಸಾವಿರ ಇದ್ದದ್ದು ಬುಧವಾರ 98,500 ರೂ.ಗೆ ಮಾರಾಟವಾಯಿತು. ಬೆಳ್ಳಿಯ ದರ ಕೂಡ ಸಾವಿರ ರೂ.ನಷ್ಟು ಏರಿಕೆಯಾಗಿದೆ. ಮಂಗಳವಾರ 99 ಸಾವಿರ ರೂ. ಇದ್ದದ್ದು ಬುಧವಾರ 1 ಲಕ್ಷ ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net