

ಮುಂಬೈ: ಮಾಹಿತಿ ತಂತ್ರಜ್ಞಾನ ಷೇರುಗಳ ಮಾರಾಟ ಮತ್ತು ವಿದೇಶಿ ನಿಧಿಗಳ ಹೊರಹರಿವಿನಿಂದಾಗಿ ಭಾರತೀಯ ಷೇರುಪೇಟೆ ಸತತ 4ನೇ ದಿನವಾದ ಸೋಮವಾರವೂ ಇಳಿಕೆ ದಾಖಲಿಸಿದೆ.
ದಿನದ ವಹಿವಾಟಿನ ಮಧ್ಯೆ 490.09 ಅಂಕಗಳಷ್ಟು ಇಳಿದು 82,010.38 ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 247.01 ಅಂಕಗಳ ಇಳಿಕೆಯೊಂದಿಗೆ 82,253.46ಕ್ಕೆ ಸ್ಥಿರಗೊಂಡಿತು. ನಿಫ್ಟಿ 67.55 ಅಂಕಗಳ ಇಳಿಕೆಯೊಂದಿಗೆ 25,082.30ಕ್ಕೆ ಸ್ಥಿರಗೊಂಡಿತು. ಕಳೆದ 4 ದಿನಗಳ ಇಳಿಕೆಯಲ್ಲಿ ಸೆನ್ಸೆಕ್ಸ್ ಸುಮಾರು 1,460 ಅಂಕ ಮತ್ತು ನಿಫ್ಟಿ 440 ಅಂಕ ಕುಸಿದಿವೆ.
ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 5,104.22 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ ಎಂದು ವಿನಿಮಯ ಕಚೇರಿ ತಿಳಿಸಿದೆ. ಈ ಮಧ್ಯೆ, ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಶೇ. 0.99ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 71.06 ಡಾಲರ್ಗೆ ತಲುಪಿದೆ.