

Fake Embassy: ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ( ಎಸ್‌ಟಿಎಫ್) ಘಾಜಿಯಾಬಾದ್ನಲ್ಲಿ 'ವೆಸ್ಟಾರ್ಕ್ಟಿಕಾ' ಎಂಬ ರಾಷ್ಟ್ರದ ನಕಲಿ ರಾಯಭಾರ ಕಚೇರಿ ಪತ್ತೆ ಹಚ್ಚಿದ್ದು, ರಾಜತಾಂತ್ರಿಕ ನಂಬರ್ ಪ್ಲೇಟ್ಗಳನ್ನ ಹೊಂದಿದ್ದ ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದಿದೆ.
ಐಷಾರಾಮಿ ಎರಡು ಅಂತಸ್ತಿನ ಕಟ್ಟಡವನ್ನ ಬಾಡಿಗೆ ಪಡೆದು ಅಮೆರಿಕಾದ ನೌಕಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ ಯಾವುದೇ ಸಾರ್ವಭಮತ್ವ ರಾಷ್ಟ್ರಗಳಿಂದ ಗುರುತಿಸದ 'ವೆಸ್ಟಾರ್ಕ್ಟಿಕಾ' ಎಂಬ ರಾಷ್ಟ್ರದ ಹೆಸರಿನಲ್ಲಿ ರಾಯಭಾರಿ ಕಚೇರಿಯನ್ನ ನಡೆಸಲಾಗುತ್ತಿತ್ತು.
ಕಚೇರಿ ಹೊರಗೆ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಧರಿಸಿದ್ದ ಐಷಾರಾಮಿ ಕಾರುಗಳು ನಿಲ್ಲಿಸಲಾಗಿತ್ತು. ಒಳಗೆ ನಕಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ರಾಜ್ಯ ನಾಯಕರ ಮಾರ್ಫ್ ಮಾಡಿದ ಚಿತ್ರಗಳು ಹಾಗೂ ವಿದೇಶಿ ಕರೆನ್ಸಿಯೊಂದಿಗೆ ಮಿಶ್ರಿತ ಫೋಟೋಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಕಲಿ ರಾಯಭಾರಿ ಕಚೇರಿ ತೆಗೆದ ಆರೋಪದ ಮೇಲೆ ಹರ್ಷವರ್ಧನ್ ಜೈನ್ ಎಂಬ ವ್ಯಕ್ತಿಯನ್ನ ಪೊಲೀಸರು ಬಂದಿಸಿದ್ದಾರೆ. ಆತ ತನ್ನನ್ನು ಅಮೆರಿಕದ ‘ಬ್ಯಾರನ್’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ವಿದೇಶಗಳಲ್ಲಿ ಉದ್ಯೋಗದ ಆಮಿಷವೊಡ್ಡುವ ಮೂಲಕ ಹಣ ವಂಚನೆಯ ಜಾಲವನ್ನೂ ನಡೆಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿಯಲ್ಲಿ 44 ಲಕ್ಷ ನಗದು, ವಿದೇಶಿ ಕರೆನ್ಸಿ, 18 ನಂಬರ್ ಪ್ಲೇಟ್‌ಗಳು, 12 ನಕಲಿ ಪಾಸ್‌ಪೋರ್ಟ್‌ಗಳು ಹಾಗೂ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೆಸ್ಟಾರ್ಕ್ಟಿಕಾ ಎಂದರೇನು?
'ವೆಸ್ಟಾರ್ಕ್ಟಿಕಾ' ಎಂಬುದು 2001ರಲ್ಲಿ ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ಟ್ರಾವಿಸ್ ಮೆಕ್‌ಹೆನ್ರಿ ಸ್ಥಾಪಿಸಿದ ಒಂದು ತಾತ್ವಿಕ ರಾಷ್ಟ್ರ. ಇದು ಅಂಟಾರ್ಕ್ಟಿಕಾದ 620,000 ಚದರ ಮೈಲಿನ ಪ್ರದೇಶವನ್ನು ತಮ್ಮದೇ ಎಂದು ಘೋಷಿಸಿದೆ. ಯಾವುದೇ ದೇಶದಿಂದ ಈ 'ರಾಷ್ಟ್ರ'ಕ್ಕೆ ಮಾನ್ಯತೆ ದೊರೆತಿಲ್ಲ. ವೆಸ್ಟಾರ್ಕ್ಟಿಕಾದ 2,000 ಕ್ಕಿಂತ ಅಧಿಕ 'ನಾಗರಿಕರು' ಇದ್ದಾರೆಂದು ಹೇಳಲಾಗುತ್ತದೆ, ಆದರೆ ಅಲ್ಲಿ ಯಾರೂ ವಾಸವಿಲ್ಲ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ ವೆಸ್ಟಾರ್ಕ್ಟಿಕಾದ ಗ್ರ್ಯಾಂಡ್ ಡಚಿ ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಅದು ಹವಾಮಾನ ಬದಲಾವಣೆ ಮತ್ತು ಅಂಟಾರ್ಕ್ಟಿಕಾದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ತನ್ನದೇ ಆದ ಧ್ವಜ, ಕರೆನ್ಸಿಯನ್ನು ಹೊಂದಿದೆ ಮತ್ತು ಯಾವುದೇ ಸರ್ಕಾರ ಗುರುತಿಸದ ಶೀರ್ಷಿಕೆಗಳನ್ನು ಸಹ ಹೊಂದಿದೆ.
ಕುತೂಹಲಕಾರಿಯಾಗಿ, ಯುಪಿ ಎಸ್‌ಟಿಎಫ್ ನಕಲಿ ರಾಯಭಾರ ಕಚೇರಿಯನ್ನು ಭೇದಿಸುವ ಕೆಲವು ದಿನಗಳ ಮೊದಲು, ವೆಸ್ಟಾರ್ಕ್ಟಿಕಾದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ತನ್ನ "ನವದೆಹಲಿಯಲ್ಲಿ ಕಾನ್ಸುಲೇಟ್ ಜನರಲ್" ನ ಫೋಟೋಗಳನ್ನು ಹಂಚಿಕೊಂಡಿತ್ತು.
ಬ್ಯಾರನ್ ಹೆಚ್.ವಿ. ಜೈನ್ ನಿರ್ವಹಿಸುತ್ತಿರುವ, ನವದೆಹಲಿಯಲ್ಲಿರುವ ವೆಸ್ಟಾರ್ಕ್ಟಿಕಾದ ಕಾನ್ಸುಲೇಟ್-ಜನರಲ್ 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ವೆಸ್ಟಾರ್ಕ್ಟಿಕಾದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದರ ಜೊತೆಗೆ, ಬ್ಯಾರನ್ ಜೈನ್ ವರ್ಷಕ್ಕೆ 5 ಬಾರಿ ಸ್ಥಳೀಯ ಜನಸಂಖ್ಯೆಗೆ ಆಹಾರವನ್ನು ವಿತರಿಸುತ್ತಾರೆ. ಅಗತ್ಯವಿರುವ 1,000 ಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಾರೆ ಎಂದು ಶೀರ್ಷಿಕೆ ಜೊತೆಗೆ ಗಾಜಿಯಾಬಾದ್‌ನಲ್ಲಿರುವ ಐಷಾರಾಮಿ ಕಟ್ಟಡದ ಫೋಟೋಗಳನ್ನು ಹಂಚಿಕೊಂಡಿದೆ.
ವೆಸ್ಟಾರ್ಕ್ಟಿಕಾ ಒಂದೇ ಅಲ್ಲ. ಪ್ರಪಂಚದಾದ್ಯಂತ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ಹಲವಾರು ಸೂಕ್ಷ್ಮ ರಾಷ್ಟ್ರಗಳಿವೆ. ಆದರೆ, ಅವು ಯಾವುದೇ ದೇಶದಿಂದ ಗುರುತಿಸಲ್ಪಟ್ಟಿಲ್ಲ.(ಏಜೆನ್ಸೀಸ್)