

ನಾಪೋಕ್ಲು:ಕಕ್ಕಬೆ ಗ್ರಾಮದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ರಸ್ತೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಏಕಕಾಲದಲ್ಲಿ ನಡೆಸಲು ಅಸಾಧ್ಯ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಮುಖ್ಯ ಎಂದರು.
ಕಕ್ಕಬೆ ಗ್ರಾಮದ ಹಲವು ರಸ್ತೆಗಳು ಹಿಂದಿನಿಂದಲೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಶಾಸಕರ ಅನುದಾನದಲ್ಲಿ ಈ ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಮೀಸಲಿರಿಸಲಾಗಿದೆ. ಮುಖ್ಯಮಂತ್ರಿಗಳ ನಿಧಿಯಿಂದ ವೈಕೋಲ್ ರಸ್ತೆ, ಪಾಡೆಯಂಡ, ನಾಟೋಳಂಡ ಮಾದಂಡ ಕುಟುಂಬಸ್ಥರ ರಸ್ತೆಗೆ ತಲಾ 15 ಲಕ್ಷ ರೂ. ಸೇರಿ ಒಟ್ಟು 45 ಲಕ್ಷ ರೂ.ಗಳು ಹಾಗೂ ಎನ್‌ಡಿಆರ್‌ಎಫ್‌ನಿಂದ ಮಾಚರ್ಂಡ ಹಾಗೂ ಬಾಲ್ ಮೊಟ್ಟೆ ರಸ್ತೆಗೆ 20 ಲಕ್ಷ ರೂ. ಗಳನ್ನು ಈ ಕಾಮಗಾರಿಗಳಿಗೆ ಬಳಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಸಂಪನ್ ಅಯ್ಯಪ್ಪ, ಹಾಗೂ ಪ್ರಮುಖರಾದ ಉಸ್ಮ್ಮಾನ್ ಹಾಜಿ, ಕತರ್ಂಡ ಶೈಲಾ ಕುಟ್ಟಪ್ಪ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿನ್ನಪ್ಪ, ಉದಿಯಂಡ ಸುಭಾಷ್, ಬಾಚಮಂಡ ಭರತ್, ನಾಟೋಳಂಡ ಶಂಬು, ಮಾದಂಡ ಉಮೇಶ್, ಪೊನ್ನೋಳ್ತಂಡ ರಘು ಚಿನ್ನಪ್ಪ, ನಾಟೋಳಂಡ ನಂಜುಂಡ, ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.