ದುಶ್ಚಟದಿಂದ ದೂರ ಉಳಿಯಿರಿ

ದುಶ್ಚಟದಿಂದ ದೂರ ಉಳಿಯಿರಿ
Published on

ಬೈಲಕುಪ್ಪೆ: ಪ್ರತಿಯೊಬ್ಬರೂ ದುಶ್ಚಟದಿಂದ ದೂರ ಉಳಿಯುವ ಮೂಲಕ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಬೈಲಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭರತ್ ಕುಮಾರ್ ಹೇಳಿದರು.

ಇಲ್ಲಿನ ಹಳಿಯೂರು ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ನಾಗರಿಕರು ವಾರಕ್ಕೊಮ್ಮೆಯಾದರೂ ಸ್ಥಳೀಯ ಆಸ್ಪತ್ರೆಗೆ ತೆರಳಿ ರಕ್ತದೊತ್ತಡ, ಮಧುಮೇಹ ತಪಾಸಣೆಗೆ ಒಳಗಾಗುವಂತೆ ಹೇಳಿದರು.

ಆರೋಗ್ಯ ಸಿಬ್ಬಂದಿ ಶಶಿಧರ, ಪ್ರದೋಷ್, ಮಂಜು, ಆಶಾ ಕಾರ್ಯಕರ್ತೆ ಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net