

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಡಾಕ್ಟರ್ಗಳಿಗೆ ಪಿಜಿ ಅಡ್ಮಿಷನ್ನಲ್ಲಿ ಕೋಟಾ ನಿರ್ಧರಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಅರುರ್ಣ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಮೀಸಲಾತಿಯಲ್ಲಿ ಬದಲಾವಣೆ ಮಾಡುವ ಶಾಸನಾತ್ಮಕ ಅಧಿಕಾರ ಇರುವಂಥದ್ದು ರಾಜ್ಯಗಳಿಗೆ. ಅವುಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಶಾಸನಬದ್ಧ ಸಂಸ್ಥೆಯೇ ಹೊರತು, ಅದಕ್ಕೆ ಮೀಸಲಾತಿ ನೀಡುವ ಅಧಿಕಾರವಿಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಟಿಸಿರುವ ಮೀಸಲು ನಿಯಮ ಅಸಾಂವಿಧಾನಿಕ ಎಂದು ಹೇಳಿದ ನ್ಯಾಯಪೀಠ ಆ ನಿಯಮವನ್ನು ಅನೂರ್ಜಿತಗೊಳಿಸಿದೆ.
ತಮಿಳುನಾಡು ಮೆಡಿಕಲ್ ಆಫೀಸರ್ಸ್ ಅಸೋಸಿಯೇಷನ್ ಮತ್ತು ಇತರರು ಎಂಸಿಐ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ.ಆರ್.ಶಾ, ಅನಿರುದ್ಧಾ ಬೋಸ್ ಕೂಡ ಇದ್ದರು. (ಏಜೆನ್ಸೀಸ್)