ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಶೂನ್ಯ ಲಾಭ: ಕೃಷಿಯಲ್ಲಿ ಎಐ ಬಳಕೆಯಿಂದ ಏನು ಪ್ರಯೋಜನ? ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ | Union Budget

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಬಜೆಟ್‌ ನಿಂದ ರಾಜ್ಯಕ್ಕೆ ಯಾವುದೇ ರೀತಿಯ ಅನುಕೂಲವಾಗಿಲ್ಲ
  • ಕೃಷಿ ಕ್ಷೇತ್ರದಲ್ಲಿ ಎಐ ಅಳವಡಿಕೆಯಿಂದ ಏನು ಪ್ರಯೋಜನ?
  • 8-9 ವರ್ಷಗಳಿಂದ ಸಕ್ಕರೆ ಬೆಲೆಯನ್ನು ಕೇಂದ್ರ ಸರ್ಕಾರ ಏಕೆ ಏರಿಕೆ ಮಾಡಿಲ್ಲ?
ಬೆಂಗಳೂರು: ಕೇಂದ್ರ ಬಜೆಟ್‌ (Union Budget) ನಿಂದ ರಾಜ್ಯಕ್ಕೆ ಯಾವುದೇ ರೀತಿಯ ಅನುಕೂಲವಾಗಿಲ್ಲ ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಎಐ ಅಳವಡಿಕೆಯಿಂದ ಏನು ಪ್ರಯೋಜನ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತಂತೆ ಕನಕಪುರದಲ್ಲಿ ಭಾನುವಾರ (ಫೆ.1) ಪ್ರತಿಕ್ರಿಯಿಸಿದ ಡಿಕೆಶಿ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ವ್ಯಾರಥಾನ್ ವಾಡಿದ್ದೇವೆ. ಮನರೇಗಾ ಬದಲಾವಣೆ ವಾಪಾಸ್ ತೆಗೆದುಕೊಳ್ಳಲಿ. ಯೋಜನೆಯನ್ನು ಹಿಂದಿನಂತೆಯೇ ಮುಂದುವರಿಸಲಿ. 60:40 ಅನುಪಾತದಲ್ಲಿ ಯಾವುದೇ ಕಾರಣಕ್ಕೂ ಜಾರಿಗೆ ತರಲು ಸಾಧ್ಯವಿಲ್ಲ. ನಮ್ಮ ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ ಎಂದರು.
ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡುವ ಬಜೆಟ್ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಮನರೇಗಾದಲ್ಲಿಯೂ ಎಐ ಬಳಕೆ ಮಾಡಿ ಕೂಲಿ ತೀರ್ವಾನ ವಾಡುತ್ತೇವೆ ಅಂದಿದ್ದರು. ಆದರೆ ಅದು ಸಾಧ್ಯವಾಯಿತೇ? ಎಐನಿಂದ ವ್ಯವಸಾಯಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದರು.
ಕಳೆದ 8-9 ವರ್ಷಗಳಿಂದ ಸಕ್ಕರೆ ಬೆಲೆಯನ್ನು ಕೇಂದ್ರ ಸರ್ಕಾರ ಏಕೆ ಏರಿಕೆ ಮಾಡಿಲ್ಲ? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಬೆಲೆ ಏರಿಕೆ ಮಾಡಲಿಲ್ಲ ಅಂದರೆ ಸಹಕಾರ ಕ್ಷೇತ್ರಗಳು ಬಾಗಿಲು ಹಾಕುವ ಹಂತಕ್ಕೆ ಬರುತ್ತವೆ. ಇದರಿಂದ ರೈತರಿಗೂ ನಷ್ಟ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
ಬೆಂಗಳೂರಿಗೆ ಹೈಸ್ಪೀಡ್ ರೈಲು ನೀಡುವ ಘೋಷಣೆಯನ್ನೂ ಟೀಕಿಸಿದ ಡಿಕೆಶಿ, ಯಾವ ಸ್ಪೀಡ್ ರೈಲೂ ಬರಲ್ಲ. ನೆರೆ ರಾಜ್ಯಗಳಲ್ಲಿ ಶೇ.90ರಷ್ಟು ಅಭಿವೃದ್ಧಿಯನ್ನು ಮಾಡುವ ಕೇಂದ್ರ ಸರ್ಕಾರ, ನಮ್ಮ ರಾಜ್ಯದಲ್ಲಿ ಮಾತ್ರ ಏಕೆ 50:50 ಅನುಪಾತ ಬಳಕೆ ಮಾಡಬೇಕು?. ಬೇಕಿದ್ದರೆ ನಾವು ಶೇ.10ರಷ್ಟು ಅನುದಾನ ನೀಡಲು ಸಿದ್ಧ, ಉಳಿಕೆಯನ್ನು ಅವರೇ ಹಾಕಿ ಮಾಡಲಿ ಎಂದರು. ಬೆಂಗಳೂರು ಬಗ್ಗೆ ಅತಿಹೆಚ್ಚು ನಿರೀಕ್ಷೆ ಇತ್ತು. ಮೋದಿಯವರೇ ಇದನ್ನು ಗ್ಲೋಬಲ್ ಸಿಟಿ ಎಂದು ಹೇಳಿದ್ದರು. ಆ ಗ್ಲೋಬಲ್ ಸಿಟಿಗೆ ಏನು ಒತ್ತು ಕೊಟ್ಟಿದ್ದಾರೆ ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net