ಗಂಗಾವತಿ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನರ ಜನಪದ ಕಾರ್ಯಕ್ರಮವನ್ನು ಪ್ರಾಚಾರ್ಯ ಬಸಪ್ಪ ನಾಗೋಲಿ ಉದ್ಘಾಟಿಸಿದರು. ಕರ್ನಾಟಕ ಸಂಗೀತ ನತ್ಯ ಅಕಾಡೆಮಿ ಸದಸ್ಯ ರಮೇಶ ಗಬ್ಬೂರು, ಉಪನ್ಯಾಸಕರಾದ ಲಿಂಗಣ್ಣ ಜಂಗಮರಹಳ್ಳಿ, ಅಜಗರ್‌ಪಾಷಾ, ರಮಾ ಇತರರಿದ್ದರು.
ಕರ್ನಾಟಕ ಸಂಗೀತ ನತ್ಯ ಅಕಾಡೆಮಿ ಸದಸ್ಯ ರಮೇಶ ಗಬ್ಬೂರು ಸಲಹೆ
ಗಂಗಾವತಿ:ಜನಪದ ಕಲೆ ಸಂರಕ್ಷಿಸುವ ಹೊಣೆಗಾರಿಕೆ ಯುವಪೀಳಿಗೆಯ ಮೇಲಿದ್ದು, ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಸಂಗೀತ ನತ್ಯ ಅಕಾಡೆಮಿ ಸದಸ್ಯ ರಮೇಶ ಗಬ್ಬೂರು ಹೇಳಿದರು.
ನಗರದ ಬಾಲಕರ ಸಪಪೂ ಕಾಲೇಜಿನಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಜನರ ಜನಪದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾವರ್ಧಕ ಸಂಘ ಗಮನಾರ್ಹ ಸಾಧನೆ ಮಾಡಿದ್ದು, ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ ಎಂದರು.
ಪ್ರಾಚಾರ್ಯ ಬಸಪ್ಪ ನಾಗೋಲಿ ಮಾತನಾಡಿ, ಜನಪದ ಮೌಖಿಕ ಪರಂಪರೆಗೆ ಸಾಕ್ಷಿಯಾಗಿದ್ದು, ಜನಪದ ಕಲೆ ವಿಸ್ತರಿಸುವ ಜವಾಬ್ದಾರಿ ಯುವ ಕಲಾವಿದರ ಮೇಲಿದೆ ಎಂದರು.
ಕಲಾವಿದೆ ರಂಜಿನಿ ಆರತಿ ಅವರಿಂದ ಜನಪದ ಗಾಯನ ಕಾರ್ಯಕ್ರಮ ನಡೆಯಿತು. ನಿವೃತ್ತ ಉಪನ್ಯಾಸ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಲಿಂಗಣ್ಣ ಜಂಗಮರಹಳ್ಳಿ, ಅಜಗರ್‌ಪಾಷಾ, ರಮಾ, ಸಾವಿತ್ರಿ, ಲಕ್ಷ್ಮೀ ಇತರರಿದ್ದರು.