ಕಲಬುರಗಿಯ ವಿಶ್ವನಾಥ ರೆಡ್ಡಿ ಮುದ್ನಾಳ ಪದವಿ ಪೂರ್ವ ಕಾಲೇಜಿನಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು. ಡಾ.ಅಲ್ಲಾಹುದ್ದಿನ್ ಸಾಗರ, ವೈಜನಾಥ ಕೋಳಾರ, ಡಾ.ಸಂತೋಷ ನಾಗಲಾಪುರ, ಸಿಎ ಆಕಾಶ ಸರಡಗಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ.ಅಲ್ಲಾಹುದ್ದೀನ್ ಹೇಳಿಕೆ
ಸುಭಾಶ್ಚಂದ್ರ ಬೋಸ್ ಜಯಂತಿ
ಕಲಬುರಗಿ: ದೇಶದ ಯುವಕರು ಶಕ್ತಿಯಾಗಿದ್ದು, ಚೈತನ್ಯಶಿಲ, ಕ್ರೀಯಾಶೀಲರಾಗಿ ವ್ಯವಸ್ಥೆ ಬದಲಾವಣೆಗೆ ಶ್ರಮಿಸಬೇಕು ಎಂದು ಡಾ.ಅಲ್ಲಾಹುದ್ದೀನ್ ಸಾಗರ್ ಹೇಳಿದರು.
ಮೇರಾ ಯುವ ಭಾರತ, ಗೌತಮ ಬುದ್ಧ ಜನ ಸಾಂಸ್ಕತಿಕ ಸೇವಾ ಸಂಸ್ಥೆ ಶರಣ ಸಿರಸಗಿ, ಯೂತ್ ಅಡ್ವೆಂಚರ್ ಸ್ಫೋಟ್ಸ್ ಅಸೋಸಿಯೇಷನ್, ವಿಶ್ವನಾಥ ರೆಡ್ಡಿ ಮುದ್ನಾಳ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತಿಯಲ್ಲಿ ಮಾತನಾಡಿದರು.
ವೈಜನಾಥ್ ಕೋಳಾರ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡಿದ ಸುಭಾಶ್ಚಂದ್ರ ಬೋಸ್ರಂತೆ ಯುವಕರು ರಾಷ್ಟ್ರಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು
ಎನ್ಜಿಎನ್ ೌಂಡೇಷನ್ ಕಾರ್ಯದರ್ಶಿ ಡಾ.ಸಂತೋಷ ನಾಗಲಾಪುರ ಮಾತನಾಡಿ, ಬಡತನದ ಮಧ್ಯೆ ಸಾಧಿಸುವ ಛಲವಿದ್ದರೆ ಏನನ್ನೂ ಸಾಧಿಸಬಹುದು. ಅದಕ್ಕೆ ಹಲವು ಸವಾಲುಗಳ ಮಧ್ಯೆ ಸಿಎ ಪಾಸ್ ಆದ ಚಿತ್ತಾಪುರದ ಆಕಾಶ ಸರಡಗಿಯೇ ಸಾ ಎಂದರು.
ಅಂತರ್ ಕಾಲೇಜುಗಳ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆರಾಧನಾ ಪದವಿ ಕಾಲೇಜು, ವಿಶ್ವನಾಥ ರೆಡ್ಡಿ ಮುದ್ನಾಳ ಪದವಿ ಕಾಲೇಜು (ದ್ವೀತಿಯ), ಕಮಲಾಪುರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದವು. ಪ್ರಾಂಶುಪಾಲ ಡಾ.ಬಸವರಾಜ ಮಠಪತಿ ಮಾಡಿದರು. ಡಾ.ಪ್ರೇಮಾ ಅಪಚಂದ ವಂದಿಸಿದರು.