

ಪ್ರಮುಖ ಮುಖ್ಯಾಂಶಗಳು
ವಾರಾಣಸಿ: ಜೀವನವಿಧಾನದ ನಡೆನುಡಿಯಲ್ಲಿ ಶುದ್ಧತೆಯನ್ನುಸಾಧಿಸಿದವರೆಲ್ಲರೂ ಇಷ್ಟಲಿಂಗದೀಕ್ಷೆಯನ್ನು ಪಡೆಯಬಹುದಾಗಿದ್ದು,ಇಷ್ಟಲಿಂಗದೀಕ್ಷೆಯನ್ನು ಪಡೆಯಲು ವರ್ಣ,ವರ್ಗಗಳಭೇದವಿರುವುದಿಲ್ಲ ಎಂದು ಕಾಶಿಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.
ಕಾಶೀಜಂಗಮವಾಡಿ ಧರ್ಮಪೀಠದಲ್ಲಿ ಪಶ್ಚಿಮಬಂಗಾಳದ ನದಿಯಾ ಜಿಲ್ಲೆಯ ಬನಮಾಲಿಪಾರಗ್ರಾಮ ನಿವಾಸಿಗಳಾದ ರುದ್ರೇಶಬಿಸ್ವಾಸ್ ಮತ್ತು ರಕ್ತಿಮ್ಜೋರ್ದಾರ್ ಎಂಬ ವಿದ್ಯಾರ್ಥಿಗಳಿಗೆಇಷ್ಟಲಿಂಗ ದೀಕ್ಷೆಯನ್ನು ನೀಡಿಆಶೀರ್ವಚನ ನೀಡಿದರು.ದೀಕ್ಷೆಯು ಬದುಕಿನಚಿತ್ಕಳೆಯಾಗಿದೆ.ಶ್ರೀಗುರುವುಕರುಣಿಸುವ ಇಷ್ಟಲಿಂಗದ ಅನುಸಂಧಾನದಲ್ಲಿಅಂತರಂಗದ ಸಂಪರ್ಕ ಸಾಧ್ಯವಾಗಿಅಲ್ಲಿ ಕಾಣಸಿಗುವ ಬಯಲಬೆಳಗಿನಮಹಾಪ್ರಕಾಶದಲ್ಲಿ ಜೀವಾತ್ಮನುಪರಮಾತ್ಮನ ದಿವ್ಯಸಾನ್ನಿಧ್ಯದಲ್ಲಿಶಾಶ್ವತ ಆನಂದವನ್ನು ಅನುಭವಿಸುವುದೇಮೋಕ್ಷ ಮಾರ್ಗದ ತಿರುಳಾಗಿದೆಎಂದು ಜಗದ್ಗುರುಗಳು ಹೇಳಿದರು.
ಒಂದೂಬಾರಿಯೂ ಕಾಶಿ ಜಗದ್ಗುರುಗಳನ್ನುನೇರವಾಗಿ ಭೇಟಿ ಮಾಡದ ದೂರದ ಪಶ್ಚಿಮಬಂಗಾಳದ 16-18 ವರ್ಷದಯುವಕರು ಕೇವಲ ಫೇಸ್‌ಬುಕ್,ಇನ್‌ಸ್ಟಾಗ್ರಾಂಮತ್ತು ಯೂಟ್ಯೂಬ್ ಮುಖಾಂತರ ಕಾಶಿಜಗದ್ಗುರುಗಳವರ ಆಶೀರ್ವಚನಗಳನ್ನುನಿರಂತರ ಆಲಿಸಿ ಸನಾತನ ವೀರಶೈವಧರ್ಮದ ಮಹತ್ವವನ್ನು ಅರಿತುಕೊಂಡುಪೂರ್ಣ ಪ್ರಭಾವಿತರಾಗಿ ಇಷ್ಟಲಿಂಗದೀಕ್ಷೆ ಪಡೆದುಕೊಳ್ಳಲು ತೀರ್ಮಾನಿಸಿಕಾಶಿ ಧರ್ಮಪೀಠಕ್ಕೆ ಆಗಮಿಸಿದ್ದರು.ಯುವಕರ ಉತ್ಕಟಧರ್ಮ ಶ್ರದ್ಧೆಯನ್ನು ಕಂಡು ಕಾಶೀಜಗದ್ಗುರುಗಳು ಅವರಿಗೆ ಇಷ್ಟಲಿಂಗದೀಕ್ಷೆ ನೀಡಿದ್ದಾರೆ.