ಅರ್ಥವಿಲ್ಲದ ಆಚರಣೆಗೆ ಯುವಜನತೆ ದಿಕ್ಕಾಪಾಲು

Youth diverted to meaningless celebrations
Youth diverted to meaningless celebrations
Published on
ತುಮಕೂರು: ಅರ್ಥವಿಲ್ಲದ ಹಾಡುಗಳು, ಅರ್ಥವಾಗದ ಅನುಕರಣೆ ಮತ್ತು ಆಚರಣೆಗಳಿಂದ ಯುವಜನಾಂಗ ದಿಕ್ಕಾಪಾಲಾಗಿದೆ. ಜನಪದ ಸಂಸತಿ, ಜನಪದ ಹಾಡುಗಳನ್ನು ಮರುಕಳಿಸುವ ಮೂಲಕ ಮರೆಯಾಗುತ್ತಿರುವ ಸಂಸತಿಯನ್ನು ಮರು ಸ್ಥಾಪಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್​ ಸಲಹೆ ನೀಡಿದರು.
ಅಂತರಂಗ ಸಂಸತಿ ಚಿಂತನ ಪ್ರತಿಷ್ಠಾನ, ಕೆಎಸ್​ಇಎಫ್​ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ "ಅಂತರಂಗದ ಹಾಡು-ಮಾತು: ಮರಳಿ ಜನಪದದ ಕಡೆಗೆ ಸಂವಾದ ಹಾಗೂ ಸಂಗೀತ ಕಾರ್ಯಕ್ರಮ'ದಲ್ಲಿ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವ ಜನಾಂಗ ಅರ್ಥವಿಲ್ಲದ ಆಚರಣೆಗಳಿಗೆ ಮಾರುಹೋಗಿದೆ. ನಮ್ಮ ಸ್ಥಳಿಯ ನೆಲಮೂಲದ ಸಂಸತಿಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಕಲಾ ಸಂಸ್ಥೆಗಳು ಹುಟ್ಟಿ ಕೆಲಸ ಮಾಡುತ್ತಿರುವುದು ತುಂಬಾ ಸಂತಸದ ವಿಚಾರ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​. ಸಿದ್ಧಲಿಂಗಪ್ಪ ಮಾತನಾಡಿ, ಹಳ್ಳಿಗಳಲ್ಲಿ ರಾಗಿ ಬೀಸುವಾಗ ಹೇಳುತ್ತಿದ್ದ ಹಾಡುಗಳು, ಮದುವೆ ಮತ್ತಿತರ ಸಮಾರಂಭಗಳಲ್ಲಿನ ಸೋಬಾನೆ ಪದಗಳು, ನಾಟಿ ಹಾಗೂ ಕೊಯ್ಲು ಮಾಡುವಾಗ ಶ್ರಮದ ಹಾಡುಗಳು ಈಗ ಮರೆಯಾಗಿವೆ. ಆ ಹಾಡುಗಳಲ್ಲಿ ಶೃಂಗಾರ ಮತ್ತು ಹಾಸ್ಯ ಸಮ್ಮಿಶ್ರಣವಾಗಿತ್ತು. ಅವುಗಳನ್ನು ಕೇಳಿದರೆ ಮನಸ್ಸಿಗೆ ಉಲ್ಲಾಸವೂ ಆಗುತ್ತದೆ. ಇಂದಿನ ದಿನಮಾನಗಳಲ್ಲಿ ಅವೆಲ್ಲವೂ ಮರೆಯಾಗುತ್ತಿರುವುದು ನಮ್ಮ ಸಂಸತಿಯೇ ನಾಶವಾದಂತೆ ಎಂದರು
.
ತುಮಕೂರು ಜಿಲ್ಲೆ ಸಾಹಿತ್ಯ, ಸಂಸತಿ ಮತ್ತು ಕಲೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯ 17ಮಂದಿ ವಿವಿಧ ಅಕಾಡೆಮಿಗಳಲ್ಲಿ ಸದಸ್ಯರಾಗಿರುವುದು, ಕಲಾವಿದರನ್ನು, ಕಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು.ಮಿರ್ಜಿ ಮಾತನಾಡಿ, ಆಧುನಿಕ ಮಾಧ್ಯಮಗಳ ಭರಾಟೆಯೊಳಗೆ ಸಿಲುಕಿ ನಮ್ಮ ಹಿಂದಿನ ಸಂಸತಿಗಳು ಕಳೆದು ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಇದಕ್ಕಾಗಿ ಪ್ರೋತ್ಸಾಹ ಅಗತ್ಯ ಎಂದರು.
ಪ್ರಾಚಾರ್ಯ ಡಾ. ಹರೀಶ್​, ಪ್ರತಿಷ್ಠಾನದ ಅಧ್ಯಕ್ಷ ಕೆ.ಜೆ.ಗುರುಸ್ವಾಮಿ, ಸಹಾಯಕ ಪ್ರಾಧ್ಯಾಪಕ ಏ. ಕ್ರಾಂತಿಕುಮಾರ್​, ಡಾ.ಟಿ.ಪಿ. ಕುಮಾರಸ್ವಾಮಿ, ಡಾ. ಅರುಣ, ಹಿರಿಯ ಸಹಾಯಕ ಪ್ರಾಧ್ಯಾಪಕ ಪಿ.ರಾಮಕೃಷ್ಣ, ಜನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಪತ್ರಕರ್ತ ಪಿ.ಡಿ.ಈರಣ್ಣ, ಸಾ.ಚಿ.ರಾಜಕುಮಾರ ಇದ್ದರು.
ವೈ.ಎನ್​.ಶಶಿಕುಮಾರ್​ ದಿಶಾ ಸುಜನ್​, ಶೋಭಾ ಅಭಿಲಾಶ್​ ಅವರ ತಂಡ ಜನಪದ ಗಾಯನ ನಡೆಸಿಕೊಟ್ಟರು. ಬೆಂಗಳೂರು ಮಂದಾರ ಗಾಯನ ಟ್ರಸ್ಟ್​ ಯರ್ರಿಸ್ವಾಮಿ ಮತ್ತು ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net