ಗ್ವಾಲಿಯರ್ ನಿವಾಸಿ ಕಮಲ್ ಜೈನ್ (28) ಮೃತ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ತನ್ನ 50 ಸಹೋದ್ಯೋಗಿಗಳೊಂದಿಗೆ ಜು.3ರಂದು ಸಂಜೆ ಖಾಸಗಿ ರೆಸಾರ್ಟ್ಗೆ ಬಂದು ತಂಗಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕಮಲ್ ಜೈನ್ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಶನಿವಾರ ಬೆಳಗಿನ ಜಾವ ಸುಮಾರು 3 ರಿಂದ 3.30ರ ವೇಳೆ ಒಬ್ಬರೇ ಸ್ವಿಮಿಂಗ್ಪೂಲ್ನಲ್ಲಿ ಈಜಲು ಇಳಿದಿದ್ದಾನೆ. ಈಜಾಡುತ್ತಾ ಆಯಾಸಗೊಂಡು ಮೇಲಕ್ಕೆ ಬರಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.