ಯುವಕರು ದೇಶದ ಅಮೂಲ್ಯ ಸಂಪತ್ತು

ವಿಜಯಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಚೇತನಾ ಬಿಸಿಎ, ಬಿಬಿಎ ಕಾಲೇಜಿನ 6ನೇ ಸೆಮಿಸ್ಟರ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ರಾಜಶ್ರೀ ಜುಗತಿ, ಅಶೋಕ ಹಂಚಲಿ, ಎಸ್.ಎಸ್. ಬ್ಯಾಕೋಡ ಮತ್ತಿತರರಿದ್ದಾರೆ.
ವಿಜಯಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಚೇತನಾ ಬಿಸಿಎ, ಬಿಬಿಎ ಕಾಲೇಜಿನ 6ನೇ ಸೆಮಿಸ್ಟರ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ರಾಜಶ್ರೀ ಜುಗತಿ, ಅಶೋಕ ಹಂಚಲಿ, ಎಸ್.ಎಸ್. ಬ್ಯಾಕೋಡ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಅಶೋಕ ಹಂಚಲಿ ಹೇಳಿಕೆ
  • ಬೀಳ್ಕೊಡುಗೆ ಸಮಾರಂಭ
ವಿಜಯಪುರ: ಜ್ಞಾನಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಸತತ ಅಧ್ಯಯನ ನಡೆಸಿ ಉನ್ನತ ಹುದ್ದೆಯನ್ನು ಅಲಂಕರಿಸಿ ಹೆತ್ತವರ ಕನಸನ್ನು ನನಸು ಮಾಡಬೇಕು ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.
ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚೇತನಾ ಬಿಸಿಎ, ಬಿಬಿಎ ಕಾಲೇಜಿನ 6ನೇ ಸೆಮಿಸ್ಟರ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಈ ದೇಶದ ಅಮೂಲ್ಯವಾದ ಸಂಪತ್ತು. ಸತತ ಓದಿನಿಂದಲೇ ಗುರಿ ಮುಟ್ಟಲು ಸಾಧ್ಯ. ಉದ್ಯೋಗಕ್ಕಾಗಿ ಯಾರು ಅಲೆದಾಡದೇ, ಉದ್ಯೋಗವನ್ನು ಸೃಷ್ಟಿಸುವಂತಹ ಸಾಧಕರು ನೀವಾಗಬೇಕು. ದೇಶದ ಸಂಸ್ಕೃತಿ ಪರಂಪರೆಯ ಜತೆಗೆ ಮಹಾನ್ ಸಾಧಕರ ಚರಿತ್ರೆ ತಿಳಿಸುವ ಮೂಲಕ ಶ್ರೇಷ್ಠ ಸಾಧನೆಯನ್ನು ಮಾಡಿ ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯ ಎಸ್.ಎಸ್. ಬ್ಯಾಕೋಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ಏಕಾಗ್ರತೆ ಜತೆಗೆ ಸತತ ಅಧ್ಯಯನ ಇದ್ದರೆ ಸಾಧನೆ ಶತಸಿದ್ಧ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿ, 2008 ರಿಂದಲೂ ನಿರಂತರವಾಗಿ ವಿಶ್ವವಿದ್ಯಾಲಯದ ರ‌್ಯಾಂಕ್ ಪಡೆದುಕೊಂಡ ರಾಜ್ಯದ ಹೆಮ್ಮೆಯ ಕಾಲೇಜು ಚೇತನಾ ಸಂಸ್ಥೆ. ಇಲ್ಲಿ ಅಧ್ಯಯನ ನಡೆಸಿದ ಹಲವು ವಿದ್ಯಾರ್ಥಿಗಳು ಸದ್ಯ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವಿದ್ಯಾರ್ಥಿಗಳು ಓದಿನ ಜತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ನಾಗರಾಜ ಹೇರಲಗಿ, ಸಹಾಯಕ ಆಡಳಿತಾಧಿಕಾರಿ ಪ್ರಮೋದ ಕುಲಕರ್ಣಿ, ಬಿಸಿಎ ವಿಭಾಗದ ಮುಖ್ಯಸ್ಥ ಪ್ರಶಾಂತ ಕಾಂಬಳೆ, ಬಿಬಿಎ ವಿಭಾಗದ ಮುಖ್ಯಸ್ಥ ವಿಜಯ ಮಹಾಂತೇಶ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net