ಶಾಲೆಯಲ್ಲಿ ಕೊಠಡಿ, ಕಾಂಪೌಂಡ್, ಹೂದೋಟ, ಮೈದಾನ, ರಸ್ತೆಯ ನಿರ್ಮಾಣ, ಗೋಡೆಗೆ ಸುಣ್ಣಬಣ್ಣ, ಸ್ಯಾನಿಟರಿ ಪ್ಯಾಡ್ ಹಾಗೂ ಬರ್ನಿಂಗ್ ಮಷಿನ್ ಸೇರಿ ನಾನಾ ಸೌಕರ್ಯಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಹಾಗೆಯೇ, ಹಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಆರು ತಿಂಗಳಾದರೂ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಮನೆಯಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲ. ಬಯಲು ಬಹಿರ್ದೆಸೆಯ ವ್ಯವಸ್ಥೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಪುಟ್ಟತಿಮ್ಮನಹಳ್ಳಿಯ ರೋಜಾಶ್ರೀಅಳಲು ತೋಡಿಕೊಂಡರು.