ವಾಣಿಶ್ರೀ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಆರೋಪಿ ಅಭಿಷೇಕ್‌ನ ಪರಿಚಯ ಆಗಿತ್ತು. ಪದವಿ ಮುಗಿಸಿದ ಬಳಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು, ಎಚ್‌ಎಸ್‌ಆರ್ ಲೇಔಟ್‌ನ ವೆಂಕಟೇಶ್ವರ ಲೇಡಿಸ್ ಪಿಜಿಯಲ್ಲಿ ವಾಸವಾಗಿದ್ದರು. ಬಹಳ ವರ್ಷದಿಂದ ಇಬ್ಬರ ನಡುವೆ ಇದ್ದ ಸ್ನೇಹವನ್ನೇ ಪ್ರೀತಿ ಎಂದು ತಿಳಿದಿದ್ದ ಆರೋಪಿ, ವಾಣಿಯ ಖಾಸಗಿ ೆಟೋಗಳನ್ನು ವಾಣಿಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಬೆದರಿಕೆ ಹಾಕಿ, ಕಿರುಕುಳ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.