ಮಾದಕ ವಸ್ತುಗಳಿಂದ ಯುವಕರು ದೂರವಿರಿ

Young people, stay away from drugs.
Young people, stay away from drugs.
Published on
ಕೆಜಿಎಫ್​: ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ಆರೋಗ್ಯದ ಕಡೆಗೆ ಆದ್ಯತೆ ನೀಡಿ, ದೈಹಿಕ ಫಿಟ್ನೆಸ್​ ಕಾಯ್ದುಕೊಳ್ಳಬೇಕಾಗಿದ್ದು, ಸಾಧ್ಯವಾದಷ್ಟು ಜಂಕ್​ಫುಡ್​ಗಳಿಂದ ಅಂತರ ಕಾಯ್ದುಕೊಂಡು ಮ್ಯಾರಥಾನ್​ಗಳಲ್ಲಿ ಭಾಗವಹಿಸುವ ಮೂಲಕ ಇತರರ ಓಟಗಾರರಿಗೆ ಮಾದರಿಯಾಗಬೇಕು ಎಂದು ಎಸ್​ಪಿ ಶಿವಾಂಶು ರಜಪೂತ್​ ಹೇಳಿದರು.
ನಗರಸಭಾ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ಬೆಸ್ಟ್​ ಟ್ರಸ್ಟ್​ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಲ್ಟ್ರಾ ಮ್ಯಾರಥಾನ್​ ಓಟದಲ್ಲಿ ಭಾಗವಹಿಸಿ ಮಾತನಾಡಿ, ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಶಾಸಕಿ ರೂಪಕಲಾ ಶಶಿಧರ್​ ಮಾತನಾಡಿ, ಕೆಜಿಎಫ್​ ನಗರಕ್ಕೆ ಇದು ಹೆಮ್ಮೆಯ ದಿನ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಯೋಮಾನದ ಸ್ವರ್ದಿಗಳಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಅಲ್ಟ್ರಾ ಮ್ಯಾರಥಾನ್​ನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. 3 ಕಿಮೀ, 5 ಕಿಮೀ, ಮತ್ತು 12.5 ಕಿಮೀ ಓಟದಲ್ಲಿ ಜಯಗಳಿಸಿದ ವಿಜೇತರಿಗೆ ಶಾಸಕರು ಬಹುಮಾನ ವಿತರಿಸಿದರು.
ಬೆಸ್ಟ್​ ಟ್ರಸ್ಟ್​ನ ಪದಾಧಿಕಾರಿಗಳಾದ ಕಮಲನಾಥನ್​, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್​ ಕುಮಾರ್​, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net