ಜಿಲ್ಲಾ ಕಸಾಪಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕುವೆಂಪು ಅವರು ಜಾತಿ ಅಸಮಾನತೆಯ ಬಗ್ಗೆ ಬರೆದ ಮೇರು ಕವಿ. ಅಂತರಂಗದ ಮೂಲಕ ಆತ್ಮ ಉನ್ನತಿ ಸಾಧಿಸಬೇಕು. ಪ್ರಕೃತಿ ಮಡಿಲಲ್ಲಿ ದೇವರು ರುಜು ಮಾಡಿದನು ಎಂಬ ಕವಿ ಹೃದಯದ ಭಾವನೆ ಹಂಚಿಕೊಂಡರು. ಪಕ್ಷಿ ಕಾಶಿ ಕೃತಿಯಲ್ಲಿ ಪಕ್ಷಿಗಳ ಬಗ್ಗೆ ವಿವರವಾದ ವಿಚಾರ ಹಂಚಿಕೊಂಡಿದ್ದಾರೆ. ಮಲೆನಾಡು ನಂದನವನ ಮತ್ತು ಸ್ವರ್ಗದ ಬೀಡೆಂದು ವರ್ಣಿಸಿದ್ದಾರೆ. ನವಿಲುಕಲ್ಲು, ಸಿಬ್ಬಲ ಗುಡ್ಡ, ಕವಿಶೈಲವನ್ನು ಸೂಯೋರ್ದಯದ ಮುಂಚೆ ನೋಡಿ ನಾವು ಅನುಭವಿಸಿದರೆ ಮಾತ್ರ ಕವಿಯ ಭಾವನೆ ಅರ್ಥ ಮಾಡಿಕೊಳ್ಳಬಹುದು ಎಂದರು.