ಗುತ್ತಿಗೆದಾರರು ತಮ್ಮ ಬದುಕಿಗೆ ಮಾತ್ರವಲ್ಲ ರಾಜ್ಯದ ಬದುಕಿಗೆ ಸಹಾಯ ಮಾಡುತ್ತಿದ್ದೀರಿ. ನಮ್ಮ ಸರ್ಕಾರ ತಂದಿದ್ದೀರಿ ಎಂಬ ಅರಿವು ನಮಗಿದೆ. ನಿಮಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ನಿಮ್ಮ ಅಧ್ಯಕ್ಷರಾದ ಮಂಜುನಾಥ್ ಅವರ ನ್ಯಾಯ ನಾನು ನೋಡುತ್ತಲೇ ಇದ್ದೇನೆ, ಮೂರು ತಿಂಗಳಿಗೊಮ್ಮೆ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅವರನ್ನು ನೋಡಿದರೆ ನೀವು ಅವರಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಒಂದು ಜಾಗ ಕೊಡಿಸಬೇಕು. ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಸಿನಿಮಾ, ಕಲೆ ಸೇರಿದಂತೆ ಇತರೆ ವಲಯದವರಿಗೆ ಒಂದು ಪ್ರಾತಿನಿಧ್ಯ ನೀಡಿದಂತೆ ಗುತ್ತಿಗೆದಾರರಿಗೆ ಒಂದು ಜಾಗ ಕೊಡಿಸಬೇಕಿದೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಇದಕ್ಕೆ ಒಂದು ದಾರಿ ಹುಡುಕಬೇಕಿದೆ” ಎಂದು ತಿಳಿಸಿದರು.