ಮನಸ್ಸಿನ ಶಾಂತಿಗೆ ಯೋಗ ಅವಶ್ಯ

ಮಾನ್ವಿ ಮೌನ ಮಿತ್ರ ಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಯೋಗಗುರು ಮೌನೇಶ ಪೋತ್ನಾಳ ಅವರಿಗೆ ಸನ್ಮಾನಿಸಲಾಯಿತು. ಯೋಗ ಸಾಧಕರಾದ ಚಂದ್ರಮೌಳೇಶ್ವರ, ವೀರನಗೌಡ ಕರಡಿಗುಡ್ಡ, ಶ್ರೀಶೈಲಗೌಡ ಇತರರಿದ್ದರು.
ಮಾನ್ವಿ ಮೌನ ಮಿತ್ರ ಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಯೋಗಗುರು ಮೌನೇಶ ಪೋತ್ನಾಳ ಅವರಿಗೆ ಸನ್ಮಾನಿಸಲಾಯಿತು. ಯೋಗ ಸಾಧಕರಾದ ಚಂದ್ರಮೌಳೇಶ್ವರ, ವೀರನಗೌಡ ಕರಡಿಗುಡ್ಡ, ಶ್ರೀಶೈಲಗೌಡ ಇತರರಿದ್ದರು.
Published on
ಮಾನ್ವಿ: ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವುದರಿಂದ  ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ ಎಂದು ಡಾ. ವಸಂತಕುಮಾರ್ ತಿಳಿಸಿದರು. 
ಪಟ್ಟಣದಲ್ಲಿ ಮೌನ ಮಿತ್ರ ಯೋಗ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ಒತ್ತಡದ ಜೀವನದಲ್ಲಿ  ತಪ್ಪದೇ ಯೋಗ ಮಾಡಲು ಸಮಯ ಮೀಸಲಿಡಬೇಕು ಎಂದರು.
ಮಾಜಿ ಸೈನಿಕ ಮಲ್ಲಯ್ಯ ನಾಯಕ ದೇವಿಪುರ, ಪ್ರಮುಖರಾದ ಕೃಷ್ಣಮೂರ್ತಿ ಕಲ್ಲೂರ್, ಆಂಜನೇಯ ಜಲ್ಲಿ ನೀರಮಾನ್ವಿ ಅವರನ್ನು ಸನ್ಮಾನಿಸಲಾಯಿತು. ಯೋಗ ಗುರು ಮೌನೇಶ ಪೋತ್ನಾಳಗೆ ಶಿಬಿರಾರ್ಥಿಗಳು ಗೌರವಿಸಿದರು. 
ಯೋಗ ಶಿಬಿರಾರ್ಥಿಗಳಾದ ಶ್ರೀಶೈಲ ಗೌಡ, ಯಲ್ಲಪ್ಪ ವಕೀಲ, ಚಂದ್ರಮೌಳೇಶ್ವರ, ಅಬಕಾರಿ ಇಲಾಖೆಯ ಪೇದೆ ಭಾರತಿ, ಲಿಂಗರಾಜ, ಬಿ.ವಿರೂಪಾಕ್ಷಪ್ಪ, ನರಸಪ್ಪ ಟೈಲರ್, ಶಿವಪ್ಪ ಮುಂದಿನಮನೆ, ಶಿವಕುಮಾರ ತೋಟದ, ಮಲ್ಲೇಶ, ಹನುಮೇಶ, ಮಲ್ಲಿಕಾರ್ಜುನ, ಭೀಮಣ್ಣ. ಸಿ.ಡಿ. ವಿಜಯಕುಮಾರ್, ದೇವಿಕಾ, ರಾಜಶೇಖರ್, ವಿರೂಪಾಕ್ಷಗೌಡ ಹರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net