ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ Yoga

ಹುಳಿಯಾರಿನಪ್ರಜಾಪಿತ Yoga  ಬ್ರಹ್ಮಕುಮಾರೀಸ್​ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಯೋಗಾಸನ ಶಿಬಿರದಲ್ಲಿ ಶಿಕ್ಷಕ ಎಚ್​.ಡಿ.ದುರ್ಗರಾಜು, ಮಲ್ಲಿಕಾರ್ಜುನ, ಚನ್ನಬಸಪ್ಪ, ರಂಗನಾಥ್​, ಪ್ರಮೀಳಾ, ಲಾವಣ್ಯ, ದಾಕ್ಷಾಯಿಣಿ, ಪ್ರೇಮಲೀಲಾ, ಪಾರ್ವತಮ್ಮ, ಪಂಡಿತ್​ ಬಸವರಾಜು, ವಿಜಯಕುಮಾರಿ, ದೇವರಾಜು ಹಾಗೂ ಗಂಗಾಧರ್​, ಶಿವಪ್ರಕಾಶ್​ ಇದ್ದರು.

Published on
ಹುಳಿಯಾರು: ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕಾಪಾಡಿಕೊಳ್ಳಲು Yoga ಯೋಗಾಭ್ಯಾಸ ಅಗತ್ಯ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಗೀತಕ್ಕ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್​ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಹುಳಿಯಾರು&ಕೆಂಕೆರೆ ಶಾಖೆ ಹಮ್ಮಿಕೊಂಡಿದ್ದ 48 ದಿನಗಳ ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ನಟರಾಜು, ಯೋಗ ಕೇವಲ ವ್ಯಾಯಾಮವಲ್ಲ, ಅದು ಜೀವನ ನಡೆಸುವ ಕಲೆ. ರೋಗಮುಕ್ತ ಸಮಾಜ ನಿಮಾರ್ಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ 48 ದಿನಗಳವರೆಗೆ ಕಾಲ ಸೂರ್ಯ ನಮಸ್ಕಾರ, ಆಸನಗಳು, ಮುದ್ರೆಗಳು ಹಾಗೂ ಪ್ರಾಣಾಯಾಮದ ಬಗ್ಗೆ ಸವಿಸ್ತಾರವಾಗಿ ಕಲಿಸಲಾಗುವುದು ಎಂದರು.
ಯೋಗ ಶಿಕ್ಷಕಿ ಬಕುಳಾದೇವಿ ಮಾತನಾಡಿ, ದಿನನಿತ್ಯದ ಜಂಜಾಟಗಳ ನಡುವೆ ಯೋಗ ಮಾಡುವುದರಿಂದ ಏಕಾಗ್ರತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net